ADVERTISEMENT

‘ನಾ ಕಂಡಂತೆ ತೇಜಸ್ವಿ; ಶಾಮಣ್ಣ’ ಪುಸ್ತಕ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 16:52 IST
Last Updated 2 ಜೂನ್ 2023, 16:52 IST

ಶಿವಮೊಗ್ಗ: ಕಡಿದಾಳ ಪ್ರಕಾಶ್ ಅವರು ಬರೆದಿರುವ ’ನಾ ಕಂಡಂತೆ ತೇಜಸ್ವಿ ; ಶಾಮಣ್ಣ‘ ಪುಸ್ತಕದ ಬಿಡುಗಡೆ ಸಮಾರಂಭ ಜೂನ್‌ 3ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಬಹುಮುಖಿ ಶಿವಮೊಗ್ಗ ಹಾಗೂ ಮೈಸೂರಿನ ಅಭಿರುಚಿ ಪ್ರಕಾಶನ ಜಂಟಿಯಾಗಿ ಕುವೆಂಪು ರಂಗ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವನ್ಯಜೀವಿ ತಜ್ಞರಾದ ಕೃಪಾಕರ- ಸೇನಾನಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅತಿಥಿಯಾಗಿ ಸಾಹಿತಿ ಜಯಂತ್ ಕಾಯ್ಕಿಣಿ ಆಗಮಿಸಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮವು ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT