ADVERTISEMENT

ಭದ್ರಾವತಿ | ಮನೆಯಲ್ಲಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:35 IST
Last Updated 6 ಮೇ 2025, 14:35 IST
ಮನೆಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ನಗದು, ಮಾಲು ಸಮೇತ ಬಂಧಿಸಿರುವ ನಗರದ ನ್ಯೂಟೌನ್ ಠಾಣೆ ಪೊಲೀಸರು
ಮನೆಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ನಗದು, ಮಾಲು ಸಮೇತ ಬಂಧಿಸಿರುವ ನಗರದ ನ್ಯೂಟೌನ್ ಠಾಣೆ ಪೊಲೀಸರು   

ಭದ್ರಾವತಿ: ಈಚೆಗೆ ಮನೆಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ನ್ಯೂಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೀನುಗಾರರ ಬೀದಿಯ ಜೈಕಾಂತ್ ಪಿ. (21) ಬಂಧಿತ.

ಮೇ 2ರಂದು ರಾತ್ರಿ ಬಿ.ಎಚ್.ರಸ್ತೆ ಮೀನುಗಾರರ ಬೀದಿಯ ಮನೆಯೊಂದರಲ್ಲಿ ಸಿಮೆಂಟ್ ಶೀಟನ್ನು ಒಡೆದು ಅಂದಾಜು ₹ 1.12 ಲಕ್ಷ ಮೌಲ್ಯದ ಆಭರಣ, ವಾಚ್ ಮತ್ತು ನಗದನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಬಗ್ಗೆ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಆರೋಪಿ ಪತ್ತೆಗಾಗಿ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾ‌ರ್ ಭೂಮರೆಡ್ಡಿ ಮತ್ತು ಎ.ಜಿ. ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ನಗರ ಉಪ ವಿಭಾಗದ ಡಿವೈಎಸ್‌ಪಿ ಕೆ.ಆರ್. ನಾಗರಾಜ್, ಸಿಪಿಐ ಶ್ರೀಶೈಲ ಕುಮಾ‌ರ್ ಅವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್ಐ ಟಿ.ರಮೇಶ್ ನೇತೃತ್ವದಲ್ಲಿ ಸಿಬ್ಬಂದಿ ಎಎಸ್ಐ ಟಿ.ಪಿ.ಮಂಜಪ್ಪ, ಸಿ.ಎಚ್.ಸಿ.ನವೀನ್, ಸಿಪಿಸಿ ನಾಗರಾಜ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಆರೋಪಿಯಿಂದ ಕಳವು ಮಾಡಿದ ಆಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.