ತೀರ್ಥಹಳ್ಳಿ: ಮಾಲತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೀಮನಕಟ್ಟೆ ತೂಗು ಸೇತುವೆ ದುರಸ್ತಿಗೆ ₹60 ಲಕ್ಷ ಮಂಜೂರಾಗಿದ್ದು, ಶಾಸಕ ಆರಗ ಜ್ಞಾನೇಂದ್ರ, ಲ್ಯಾಂಡ್ ಆರ್ಮಿ ಎಂಜಿನಿಯರ್ ಹಾಗೂ ಪರಿಣಿತರ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಮುಳುಬಾಗಿಲು, ಹೆಗ್ಗೋಡು ಗ್ರಾಮ ಪಂಚಾಯಿತಿ ನಡುವಿನ ಸಂಪರ್ಕ ಕೊಂಡಿಯಾಗಿ ತೂಗು ಸೇತುವೆ ಇತ್ತು. ಗ್ರಾಮ ಪಂಚಾಯಿತಿಗಳ ತಿಕ್ಕಾಟದಿಂದ ಸೇತುವೆ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಅಪಾಯದ ಸ್ಥಿತಿ ತಲುಪಿದೆ ಎಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅನುದಾನ ಬಿಡುಗಡೆಗಾಗಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು.
ಹೆಗ್ಗೋಡು ಪಂಚಾಯಿತಿ ಅಧ್ಯಕ್ಷೆ ರೇಖಾ ದಿನೇಶ್, ಮುಳುಬಾಗಿಲು ಗ್ರಾ.ಪಂ. ಸದಸ್ಯರಾದ ಬಿ.ಆರ್.ಮೋಹನ್, ಅಭಿ ಬಾಳೆಕೊಪ್ಪ, ಸಂತೋಷ್, ಕೃಷ್ಣಮೂರ್ತಿ, ಎಂಜಿನಿಯರ್ ಪ್ರಮೋದ್, ಸುನಿಲ್, ತಂತ್ರಜ್ಞ ಸುಳ್ಯ ಪತಂಜಲಿ ಭಾರದ್ವಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.