ತ್ಯಾಗರ್ತಿ: ಕಳೆದ ಮುಂಗಾರಿನಲ್ಲಿ ಬಿತ್ತಿದ ಜೋಳ ಕೈಗೆ ಸಿಗದೆ ನಷ್ಟ ಎದುರಿಸಿದ್ದ ಇಲ್ಲಿನ ರೈತರು, ಬೇಸಿಗೆಯಲ್ಲಿ ಮತ್ತೆ ಬಿತ್ತನೆ ಮಾಡಿ, ಒಳ್ಳೆಯ ಫಸಲು ಪಡೆದಿದ್ದಾರೆ. ಆದರೆ ಕಟಾವು ಸಮಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಜೋಳ ಮೊಳಕೆಯೊಡೆದು ನಷ್ಟ ಅನುಭವಿಸುವಂತಾಗಿದೆ.
ಇಂತಹ ಸಂಕಷ್ಟ ಸಂದರ್ಭದಲ್ಲಿ ಖರೀದಿ ಕೇಂದ್ರ ತೆರೆಯಲು ಜನಪ್ರತಿನಿಧಿಗಳು ಮುಂದಾಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯಲ್ಲಿ ಭತ್ತ ಮತ್ತು ಜೋಳ ಬೆಳೆದ ರೈತರು ನಷ್ಟ ಅನುಭವಿಸಿದ್ದು, ಅವರಿಗೆ ಕೂಡಲೇ ಸರ್ಕಾರವು ನಷ್ಟ ಪರಿಹಾರ ನೀಡುವುದರ ಜೊತೆಗೆ ಮುಂಗಾರು ಹಂಗಾಮಿಗೆ ಬೀಜ ಮತ್ತು ಗೊಬ್ಬರವನ್ನು ಉಚಿತವಾಗಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಆಗ್ರಹಿಸಿದ್ದಾರೆ.
ಕಳೆದ ವರ್ಷ ಮಳೆಯಿಂದ ಹಾನಿಯಾದ ಮನೆಗಳಿಗೆ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರಕದೇ ಇದ್ದರೂ ಶಾಸಕರು ಈ ವರ್ಷ ಕೇವಲ ಪ್ರಚಾರಕ್ಕಾಗಿ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಅಲ್ಪ ಪ್ರಮಾಣದ ಸಹಾಯಧನ ನೀಡಿ ಭರವಸೆಯ ಮಾತು ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.