ADVERTISEMENT

ತಲಾಖ್ ವಿರುದ್ಧ ಸಿಗದ ಸಹಕಾರ: ಆಯೇಷಾ ಬೇಸರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:23 IST
Last Updated 27 ಸೆಪ್ಟೆಂಬರ್ 2019, 13:23 IST

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಪತಿ ವಾಟ್ಸ್‌ಆ್ಯಪ್‌ನಲ್ಲೇ ತಲಾಖ್ ನೀಡಿದ್ದಾರೆ. ದೇಶದಲ್ಲಿ ತಲಾಖ್ ರದ್ದಾದರೂ ಧರ್ಮದ ಮುಖಂಡರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆಯೇಷಾ ಸಿದ್ದಿಕಿ ಆರೋಪಿಸಿದರು.

ಮುಸ್ಲಿಂ ಹೆಣ್ಣು ಮಕ್ಕಳ ಗೋಳು ಯಾರೂ ಕೇಳುತ್ತಿಲ್ಲ. ಸಂಘ, ಸಂಸ್ಥೆಗಳು, ಸಂಘಟನೆಗಳು, ಪೊಲೀಸರು ನೆರವಾಗುತ್ತಿಲ್ಲ. ಮಗಳ ಪೋಷಣೆಯೂ ಕಷ್ಟವಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

20 ವರ್ಷ ಜತೆಗಿದ್ದ ಪತಿ ಒಮ್ಮೆಯೇ ದೂರವಾದರೆ ಹೇಗೆ ಬದುಕು ನಡೆಸಬೇಕು. 5 ವರ್ಷ ಮಕ್ಕಳಾಗದ ಕಾರಣ ಮಗು ದತ್ತು ಪಡೆದಿದ್ದೆವು. ನಂತರ ಆ ಮುವಿನ ಮೇಲೆ ಪ್ರೀತಿ ಕಡಿಮೆಯಾಗಬಾರದು ಎಂದು ಗರ್ಭಕೋಶವನ್ನೇ ತೆಗೆಸಲಾಗಿತ್ತು. ಈಗ ₨ 5 ಲಕ್ಷ ಪರಿಹಾರ ನೀಡುತ್ತಾರೆ. ತೆಗೆದುಕೊಂಡು ಹೋಗಬೇಕು ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.