ADVERTISEMENT

ಗೋಕರ್ಣ ದೇವಸ್ಥಾನವನ್ನೂ ಸರ್ಕಾರ ವಶಕ್ಕೆ ಪಡೆಯಲಿ: ಸವಾಲು

ಸಿಗಂದೂರು ಹೋರಾಟಕ್ಕೆ ಕಾಗೋಡು ನೇತೃತ್ವ ಸರಿಯಲ್ಲ: ಕಬಸೆ ಅಶೋಕ ಮೂರ್ತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 10:38 IST
Last Updated 5 ನವೆಂಬರ್ 2020, 10:38 IST
ಸಿಗಂದೂರು ಚೌಡೇಶ್ವರಿ (ಸಂಗ್ರಹ ಚಿತ್ರ)
ಸಿಗಂದೂರು ಚೌಡೇಶ್ವರಿ (ಸಂಗ್ರಹ ಚಿತ್ರ)   

ಶಿವಮೊಗ್ಗ: ಹಿಂದುಳಿದ ವರ್ಗಗಳ ದೇವಸ್ಥಾನವನ್ನು ಸ್ವಾಧೀನಕ್ಕೆಪಡೆಯಲುಹುನ್ನಾರ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೋಕರ್ಣ ದೇವಸ್ಥಾನವನ್ನೂ ವಶಕ್ಕೆ ಪಡೆಯಲಿ ಎಂದು ಸಾಮಾಜಿಕ ಹೋರಾಟಗಾರ ಕಬಸೆ ಅಶೋಕ ಮೂರ್ತಿ, ಪರಿಸರ ಹೋರಾಟಗಾರರಾದ ರಮೇಶ್ ಐಗಿನಬೈಲು, ಮುರಳೀಧರ ಎಚ್‌.ಎಸ್.ಹೊಸಗುಂದ ಒತ್ತಾಯಿಸಿದ್ದಾರೆ.

ಮುಜರಾಯಿ ವಶದಲ್ಲಿದ್ದ ಗೋಕರ್ಣ ದೇವಸ್ಥಾನವನ್ನು 2008ರಲ್ಲಿಬಿ.ಎಸ್.ಯಡಿಯೂರಪ್ಪ ಅವರು ಅಲ್ಲಿದ್ದ ಬಂಗಾರ, ಬೆಳ್ಳಿ, ವಜ್ರ, ವೈಡೂರ್ಯ, ಕೋಟ್ಯಂತರ ಹಣವಿದ್ದ ಹುಂಡಿ ಸಮೇತ ಭಾರೀ ವಿರೋಧದ ಮಧ್ಯೆಯೂ ರಾಘವೇಶ್ವರ ಸ್ವಾಮಿ ಅವರ ವಶಕ್ಕೆ ನೀಡಿದ್ದರು.ಈಗ ರಾಮಪ್ಪ ಅವರ ವಶದಲ್ಲಿದ್ದರುವ ಹಿಂದುಳಿದ ವರ್ಗದ ದೇವಸ್ಥಾನ ಸಿಗಂದೂರನ್ನು ಸರ್ಕಾರದ ವಶಕ್ಕೆ ಪಡೆಯುವ ಹುನ್ನಾರ ರೂಪಿಸಿದ್ದಾರೆ. ಆರ್‌ಎಸ್ಎಸ್‌ಕಾರ್ಯಸೂಚಿ ಜಾರಿಗೆ ತರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ರೀತಿಯ ಅನಾಹುತಕಾರಿ ಕೆಲಸಗಳನ್ನು ಯಾವುದೇ ಅಂಜಿಕೆ ಇಲ್ಲದೇ ಮಾಡುತ್ತಿದೆ. ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ವಿರೋಧಿ ಎನ್ನುವುದನ್ನು ಪದೇಪದೆದೃಢಪಡಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

2008ರಲ್ಲಿ ಹೊಸನಗರದ ರಾಮಚಂದ್ರಪುರ ಮಠದಲ್ಲಿ ನಡೆದ ಗೋ ಸಮ್ಮೇಳನದಲ್ಲಿ ನೂರಾರು ಎಕರೆ ಕಾಡು ನಾಶ ಮಾಡಲಾಗಿತ್ತು.ಗುಡ್ಡ ಸಮತಟ್ಟು ಮಾಡಿದಕ್ಕೆಅರಣ್ಯ ಇಲಾಖೆ ₹ 75 ಲಕ್ಷ ದಂಡ ವಿಧಿಸಿತ್ತು.ಪ್ರಕರಣ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸರ್ಕಾರಿ ವಕೀಲರು ನಿರ್ಲಕ್ಷ ಧೋರಣೆ ಅನುಸರಿಸಿದ್ದಾರೆ. ರಾಮಚಂದ್ರಪುರ ಮಠದವರು ಮಾಡಿರುವ ತಪ್ಪಿಗೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಯಡಿಯೂರಪ್ಪ, ಹಿಂದುಳಿದ ವರ್ಗದ ಹಿಡಿತದಲ್ಲಿದ್ದ ಸಿಗಂದೂರು ಕ್ಷೇತ್ರದ ಬಗ್ಗೆ ಆಸಕ್ತಿ ತೋರುತ್ತಿರುವುದರ ಹಿಂದೆಮಠಾಧೀಶರಕೈವಾಡ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸಿಗಂದೂರು ಹೋರಾಟಕ್ಕೆ ಕಾಗೋಡು ನೇತೃತ್ವ ಸರಿಯಲ್ಲ:ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಗೌರವವಿದೆ. ಆದರೆ, ಅವರು ಒಂದು ಪಕ್ಷದ ಅಡಿಯಲ್ಲಿ ಇರುವ ಕಾರಣಸಿಗಂದೂರು ಉಳಿಸಿ ಹೋರಾಟದ ನೇತೃತ್ವ ವಹಿಸುವುದು ಸೂಕ್ತವಲ್ಲ. ಈ ಹೋರಾಟ ಪಕ್ಷಾತೀತ, ಜಾತ್ಯತೀತ ಹೋರಾಟವಾಗಿ ನಡೆಯಬೇಲು.ಕಾಗೋಡು ನೇತೃತ್ವ ವಹಿಸಿದರೆ ಅದನ್ನು ಯಡಿಯೂರಪ್ಪ ಸರ್ಕಾರ ಕಾಂಗ್ರೆಸ್ ಹೋರಾಟ ಎಂದು ದಾರಿತ‍ಪ್ಪಿಸುವ ಸಾಧ್ಯತೆ ಹೆಚ್ಚು ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.