ADVERTISEMENT

ಈಶ್ವರಪ್ಪ ಜನುಮ ದಿನ: 10ರಂದು ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:41 IST
Last Updated 3 ಜೂನ್ 2019, 14:41 IST

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಮಾರಿಕಾಂಬಾ ಮೈಕ್ರೊ ಫೈನಾನ್ಸ್ ಜೂನ್‌ 10ರಂದು ಉದ್ಯೋಗ ಮೇಳ ಆಯೋಜಿಸಿದೆ.

ಸಹ್ಯಾದ್ರಿ ಕಾಲೇಜು ಬಳಿಯ ನಂದನ ಶಾಲೆ ಆವರಣದಲ್ಲಿ ನಡೆಯುವ ಮೇಳವನ್ನು ಉಡುಪಿಯ ಪೇಜಾವರ ಶ್ರೀ ಉದ್ಘಾಟಿಸುವರು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. 8ನೇ ತರಗತಿಯಿಂದ ಹಿಡಿದು, ಪದವಿ, ಉನ್ನತ ಪದವಿ, ಡಿಪ್ಲಮೊ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಬಹುದು (ಮಾಹಿತಿಗೆ: 9110481153, 7338154564) ಎಂದು ಸಂಸ್ಥೆಯ ಸಿಇಒ ಕಾಂತೇಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾರಿಕಾಂಬಾ ಸಂಸ್ಥೆ ಇದುವರೆಗೆ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದೆ. ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಜತೆ ಹಲವು ಮಹಿಳಾ ಸ್ವಾವಲಂಬನೆಯ ಕಾರ್ಯಕ್ರಮ ರೂಪಿಸಿದೆ. ಸ್ತ್ರೀ ಶಕ್ತಿ ಸಂಘಗಳ ಸುಮಾರು 12 ಸಾವಿರ ಹೆಣ್ಣು ಮಕ್ಕಳಿಗೆ ₨ 32ಕೋಟಿ ಸಾಲ ವಿತರಿಸಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮುಖಂಡರಾದ ಜ್ಞಾನೇಶ್ವರ್, ಕೆ.ಶಂಕರ್, ವಿಶ್ವಾಸ್, ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.