
ಸಾದರ ಸ್ವೀಕಾರ
ಶಿರಾಳಕೊಪ್ಪ (ಶಿಕಾರಿಪುರ): ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಂಘಟನೆ ವತಿಯಿಂದ ಮೂರನೇ ರಾಷ್ಟ್ರೀಯ ಮಟ್ಟದ ಉರ್ದು ಸಾಹಿತ್ಯ ಸಮ್ಮೇಳನ ಡಿ. 19 ರಂದು (ಶುಕ್ರವಾರ) ಹಜರತ್ ಟಿಪ್ಪು ಸುಲ್ತಾನ್ ಹಾಲ್‌ನಲ್ಲಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಮೊಹಮ್ಮದ್ ಅಯೂಬ್ ತಿಳಿಸಿದರು.
‘ಪ್ರವಾದಿ ಮೊಹಮ್ಮದ್ ಜನ್ಮದಿನ ಅಂಗವಾಗಿ ಪ್ರತಿವರ್ಷ ಸಮ್ಮೇಳನ ಆಯೋಜಿಸಲಾಗುತ್ತಿದೆ. ದೇಶದ ಹಲವು ರಾಜ್ಯಗಳಿಂದ ಪ್ರಖ್ಯಾತ ಕವಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಭಾಷೆ ಕುರಿತ ಅರಿವು, ಶಿಕ್ಷಣಕ್ಕೆ ಸಹಾಯ ಮಾಡುವ ಹಲವು ಮಾರ್ಗದ ಚಿಂತನೆ ನಡೆಯಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು .ಈ ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲ ಉರ್ದು ಸಾಹಿತಿಗಳು, ಜನಸಾಮಾನ್ಯರು ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಸಮ್ಮೇಳನ ಸಂಚಾಲಕ ಶಫಿ ಅಹ್ಮದ್, ಖಜಾಂಚಿ ನವೀದ್, ಸೊಹೈಲ್ ಶುಂಠಿ, ಜಿಯಾವುಲ್ಲ, ಬುಧ್ವಂತ್, ಸೈಯದ್ ಆಬಿದ್, ಮುದಸ್ಸೀರ್, ಎಜಾಜ್ ಅಹ್ಮದ್, ಜಾಫರ್‌ಯಾಬ್, ನೂರುಲ್ಲಾ ತವಕ್ಕಲ್, ಫಾರೂಕ್ ಶೇಖ್, ಇನ್ಮಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.