ADVERTISEMENT

ಕುವೆಂಪು ವಿಶ್ವವಿದ್ಯಾಲಯ : 23ರಿಂದ ಕೋಕೋ ಕಲರವ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 10:57 IST
Last Updated 21 ಡಿಸೆಂಬರ್ 2019, 10:57 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಡಿ.23ರಿಂದ 26ರವರೆಗೆ ದಕ್ಷಿಣ ವಲಯ ಮತ್ತು ಅಖಿಲ ಭಾರತ ಅಂತರವಿಶ್ವವಿದ್ಯಾಲಯ ಪುರುಷರ ಕೋ-ಕೋ ಪಂದ್ಯಗಳನ್ನು ಆಯೋಜಿಸಲಾಗಿದೆ.

ಡಿ.28ರಿಂದ 30ರವರೆಗೆ ನಾಕೌಟ್ಹಾಗೂ ಲೀಗ್ಮಾದರಿಯಲ್ಲಿ ಅಖಿಲ ಭಾರತ ಪಂದ್ಯಗಳು ನಡೆಯಲಿವೆ.13 ವರ್ಷಗಳ ನಂತರಮತ್ತೆ ವಿಶ್ವವಿದ್ಯಾಲಯದಲ್ಲಿ ಕೋಕೋ ಪಂದ್ಯಗಳನ್ನು ನಡೆಸುವ ಅವಕಾಶ ದೊರೆತಿದೆ ಎಂದು13 ವರ್ಷಗಳ ನಂತರ ಮತ್ತೊಮ್ಮೆ ಈ ಪಂದ್ಯಾವಳಿ ಆಯೋಜಿಸುವ ಅವಕಾಶ ಲಭಿಸಿದೆ ಎಂದು ಕಲಪತಿಪ್ರೊ.ಬಿ.ಪಿ.ವೀರಭದ್ರಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರ್ನಾಟಕದಿಂದ23 ತಂಡಗಳು, ಆಂಧ್ರಪ್ರದೇಶದಿಂದ 17, ತೆಲಂಗಾಣದಿಂದ 9, ಕೇರಳದಿಂದ 4, ತಮಿಳುನಾಡಿನಿಂದ 20 ಹಾಗೂ ಪಾಂಡಿಚೇರಿಯಿಂದ 1 ತಂಡ ತಂಡಗಳುಸೆಣಸಲಿವೆ. 74 ವಿಶ್ವವಿದ್ಯಾಲಯಗಳ 888 ಆಟಗಾರರು, 148 ಅಧಿಕಾರಿಗಳು, 30 ತೀರ್ಪುಗಾರರು,ಸುಮಾರು 250 ತಾಂತ್ರಿಕ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಪಂದ್ಯಗಳ ಯಶಸ್ಸಿಗೆಶ್ರಮಿಸಲಿದ್ದಾರೆ ಎಂದರು.

ADVERTISEMENT

ಡಿ.23ರ ಮಧ್ಯಾಹ್ನ 3.30ಕ್ಕೆ ಸಚಿವ ಸಿ.ಟಿ.ರವಿ ಉದ್ಘಾಟಿಸುವರು. ಶಾಸಕರಾದ ಬಿ.ಕೆ.ಸಂಗಮೇಶ್ವರ್, ಡಿ.ಎಸ್.ಸುರೇಶ್, ಅಧಿಕಾರಿಗಳಾದ ಎಸ್.ಎಸ್.ಪಾಟೀಲ್, ಎಂ.ವೆಂಕಟೇಶ್ವರಲು, ಎಚ್.ಎನ್.ರಮೇಶ್, ಎಂ.ಗುರುಲಿಂಗಯ್ಯ, ಎಸ್.ಎಂ.ಪ್ರಕಾಶ್, ಅರಣ್ಯಾಧಿಕಾರಿ ಎಚ್.ಪಿ.ರಾಘವೇಂದ್ರ ಭಾಗವಹಿಸುವರು. ಡಿ.26ರ ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪದಲ್ಲಿಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಈಶ್ವರಪ್ಪ ಬಹುಮಾನ ವಿತರಿಸುವರು ಎಂದು ವಿವರ ನೀಡಿದರು.

ಹಿಂದಿನವರ್ಷ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಅಂತರವಿಶ್ವವಿದ್ಯಾಲಯ ಪಂದ್ಯದಲ್ಲಿವಿನ್ನರ್ಸ್, ರನ್ನರ್ಸ್ ಹಾಗೂ 3ನೇ ಸ್ಥಾನ ಪಡೆದ 4 ತಂಡಗಳು ನೇರವಾಗಿ ಕ್ವಾಟರ್ ಫೈನಲ್ ಪ್ರವೇಶಿಸಿವೆ.ಈತಂಡಗಳು ಡಿ.28ರಿಂದ 30ರವರೆಗೆ ಅಖಿಲ ಭಾರತ ಪಂದ್ಯಗಳಲ್ಲಿ ಸೆಣೆಸಲಿವೆ.ಅಂತರವಲಯಕ್ಕೆ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಲಯದಿಂದ ಅರ್ಹತೆಗಳಿಸುವ ತಲಾ 4ತಂಡಗಳುಭಾಗವಹಿಸಲಿವೆ ಎಂದರು.

16 ತಂಡಗಳು ಭಾಗವಹಿಸುವ ಅಖಿಲ ಭಾರತ ಪಂದ್ಯವನ್ನುಡಿ.28ರ ಬೆಳಿಗ್ಗೆ 9ಕ್ಕೆಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಕ್ರೀಡಾಪಟು ಶೋಭಾ ನಾರಾಯಣ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ್ ಭಾಗವಹಿಸುವರು.ಡಿ.30ರ ಮಧ್ಯಾಹ್ನ 3.30ಕ್ಕೆ ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಡಾ.ಎನ್.ಡಿ.ವಿರೂಪಾಕ್ಷ, ಸಿಂಡಿಕೇಟ್‌ ಸದಸ್ಯ ಬಳ್ಳಕೆರೆ ಸಂತೋಷ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಸತ್ಯಪ್ರಕಾಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.