ADVERTISEMENT

ಶಿವಮೊಗ್ಗ | ಅಧಿಕಾರಿಗಳಿಗೆ ತ್ಯಾಜ್ಯ ವಿಲೇವಾರಿ ಸವಾಲು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 6:46 IST
Last Updated 26 ಸೆಪ್ಟೆಂಬರ್ 2024, 6:46 IST

ಶಿವಮೊಗ್ಗದ ರೈಲು ನಿಲ್ದಾಣ ಪಕ್ಕದ ಶೇಷಾದ್ರಿಪುರಂ ಬಡವಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ತ್ಯಾಜ್ಯ ಸುರಿದಿರುವುದು

ಶಿವಮೊಗ್ಗದ ರೈಲು ನಿಲ್ದಾಣ ಪಕ್ಕದ ಶೇಷಾದ್ರಿಪುರಂ ಬಡವಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ತ್ಯಾಜ್ಯ ಸುರಿದಿರುವುದು

ಶಿವಮೊಗ್ಗ: ಇಲ್ಲಿನ ರೈಲು ನಿಲ್ದಾಣದ ಪಕ್ಕದಲ್ಲಿರುವ ಶೇಷಾದ್ರಿಪುರಂ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ನಿತ್ಯವೂ ಕಸ ಸುರಿಯಲಾಗುತ್ತಿದ್ದು, ದುರ್ವಾಸನೆ ಬೀರುವ ಕಾರಣ ಈ ಪ್ರದೇಶದಲ್ಲಿ ಸಂಚಾರ ಮಾಡುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾದಂತಹ ಸ್ಥಿತಿ ಇದೆ.

ADVERTISEMENT

ಕಸ ಮತ್ತು ಬೇಡವಾದ ವಸ್ತುಗಳನ್ನು ರಸ್ತೆ ಬದಿ ಸುರಿಯದಂತೆ ಪಾಲಿಕೆ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಕೆಲವರು ರಸ್ತೆ ಬದಿಯಲ್ಲೇ ಕಸ ಬಿಸಾಕುವುದನ್ನು ಬಿಡುತ್ತಿಲ್ಲ. ಹಲವಾರು ನಿರುಪಯುಕ್ತ ವಸ್ತುಗಳನ್ನು ಮನಸ್ಸಿಗೆ ಬಂದಂತೆ ಎಸೆದು ಹೋಗುತ್ತಿದ್ದಾರೆ. ಸ್ವಚ್ಛತೆ ಕಾಪಾಡುವುದು ಪಾಲಿಕೆಗೆ ಸವಾಲಿನ ಕೆಲಸವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.

ನಗರ ಪ್ರದೇಶದಲ್ಲಿ ಪ್ರತಿ ಮನೆಗೂ ಪಾಲಿಕೆಯಿಂದ ಎರಡು ಪ್ರತ್ಯೇಕ ಡಬ್ಬಿಗಳನ್ನು ವಿತರಿಸಲಾಗಿದೆ. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ಹಾಕುವಂತೆ ಮಾಹಿತಿ ನೀಡಲಾಗಿದೆ. ಕಸದ ವಾಹನಗಳು ನಿತ್ಯ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿವೆ. ಆದರೂ ಜನರು ರಸ್ತೆ ಬದಿ ಬೇಡವಾದ ವಸ್ತುಗಳನ್ನು ಎಸೆದು ಹೋಗುವುದನ್ನು ನಿಲ್ಲಿಸುತ್ತಿಲ್ಲ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹಾಸಿಗೆ, ದಿಂಬು, ಪ್ಲಾಸ್ಟಿಕ್‌ ಚೀಲಗಳು, ಬಾಳೆ ದಿಂಡು, ಬಟ್ಟೆಗಳು, ಬ್ಯಾಗ್‌, ತೆಂಗಿನಕಾಯಿಯ ಚಿಪ್ಪುಗಳು ಹಾಗೂ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಜನರು ಈ ಪ್ರದೇಶದಲ್ಲಿ ತಂದು ಸುರಿದು ಹೋಗುತ್ತಿದ್ದಾರೆ. ಹಂದಿಗಳು ಕಸದ ನಡುವೆ ಓಡಾಡುತ್ತಿವೆ. ಕೆಲವರು ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ. ಕಸ ಸುರಿಯುವರ ಬಗ್ಗೆ ಪಾಲಿಕೆ ಸಿಬ್ಬಂದಿ ನಿಗಾ ವಹಿಸುವ ಮೂಲಕ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾದಚಾರಿಗಳು ಆಗ್ರಹಿಸಿದ್ದಾರೆ.

ಬಹುತೇಕರು ರಾತ್ರಿ ಹೊತ್ತಿನಲ್ಲಿ ಬಂದು ಈ ಪ್ರದೇಶದಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಅವರನ್ನು ಗುರುತಿಸುವುದಕ್ಕೂ, ತಿಳಿಹೇಳಿ ತಡೆದು ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ. ರಸ್ತೆ ಬದಿ ಕಸ ಹಾಕುವುದು ಬಿಡಬೇಕಿದೆ. ಈ ಪ್ರದೇಶದಲ್ಲಿ ಪಾಲಿಕೆಯು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶೇಷಾದ್ರಿಪುರಂ ಬಡವಾಣೆಯ ನಿವಾಸಿ ಎನ್‌. ಭೀಮರಾಯ ಆಗ್ರಹಿಸಿದರು.

ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡಬೇಕು. ನಿರ್ಲಕ್ಷ್ಯ ತೋರಿದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಜನರೂ ತಮ್ಮ ಜವಾಬ್ದಾರಿ ಅರಿಯಬೇಕು. ಮನೆ ಬಾಗಿಲಿಗೆ ಬರುವ ಕಸ ಸಂಗ್ರಹ ವಾಹನಗಳಲ್ಲೇ ಕಸ ಹಾಕಬೇಕು ಎಂದು ಎಂ. ಬಸವರಾಜ ಸಲಹೆ ನೀಡಿದರು.

ಸಾರಾಂಶ

ಸಾವರ್ಜನಿಕರು ರಸ್ತೆ ಬದಿ ಕಸ ಸುರಿಯಬಾರದು. ಕಸಸಂಗ್ರಹ ವಾಹನಗಳಿಗೆ ಕಸ ಹಾಕಬೇಕು. ನಗರದಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆಗೆ ಸಹಕಾರ ನೀಡಬೇಕು.

-ಕವಿತಾ ಯೋಗಪ್ಪನವರ, ಆಯುಕ್ತರು, ಮಹಾನಗರ ಪಾಲಿಕೆ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.