ADVERTISEMENT

ನೀರಿನ ಸಮಸ್ಯೆಯೇ? ತಕ್ಷಣ ಕರೆ ಮಾಡಿ...

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 9:23 IST
Last Updated 12 ಫೆಬ್ರುವರಿ 2019, 9:23 IST

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಜಲಸೇವಾ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ.

ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. 24 ಗಂಟೆಗಳೂ ಕಾರ್ಯನಿರ್ವಹಿಸಲಿವೆ. ಕುಡಿಯುವ ನೀರಿಗೆ ಸಂಬಂಧಿಸಿದ ಯಾವುದೇ ದೂರು, ಅಹವಾಲುಗಳನ್ನು ಸೇವಾ ಜಾಲದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದಾಖಲಿಸಬಹುದು.

ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯ ಸಂಪರ್ಕಾಧಿಕಾರಿಯನ್ನು 08182-–228048, 9880633271 ಈ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.

ADVERTISEMENT

ಶಿವಮೊಗ್ಗ ತಾಲ್ಲೂಕು 08182-–250270, 9481492685, ಭದ್ರಾವತಿ 08282-–269694, 8217096849/9448921707,

ತೀರ್ಥಹಳ್ಳಿ 08181-–229767, 9448173120, ಸಾಗರ 08183–-228212, 9480151123,

ಹೊಸನಗರ 08185–-221138, 9591389166,

ಶಿಕಾರಿಪುರ 08187–-223122, 9480151123

ಸೊರಬ ತಾಲ್ಲೂಕು ಸೇವಾ ಕೇಂದ್ರದ ಸಂಖ್ಯೆ 08184–272071, 9480876128 ಸಂರ್ಕಿಸಹುದು.

ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ, ವಿತರಣೆ ವ್ಯತ್ಯಯ, ಸೋರಿಕೆ, ವಿಳಂಬ ಮತ್ತಿತರ ಸಮಸ್ಯೆಗಳಿಗೆ ಆಯಾ ತಾಲ್ಲೂಕು ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.