ADVERTISEMENT

ವಾರಾಂತ್ಯ ಕರ್ಫ್ಯೂ: ಜಾತ್ರೆ, ಸಂತೆ ನಿಷೇಧ

ಸಿಂಹಧಾಮಕ್ಕೆ ಅವಕಾಶವಿಲ್ಲ, ಗ್ರಂಥಾಲಯ, ದೇವಸ್ಥಾನಗಳಿಗೂ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 4:59 IST
Last Updated 8 ಜನವರಿ 2022, 4:59 IST

ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ಹೆಚ್ಚು ಜನ ಸೇರುವ ಸಂತೆ, ಜಾತ್ರೆಗೆ ಅವಕಾಶವಿಲ್ಲ, ಸಿಂಹಧಾಮಕ್ಕೂ ಅವಕಾಶ ಇಲ್ಲ, ಗ್ರಂಥಾಲಯವೂ ಬಾಗಿಲು ತೆಗೆಯಲ್ಲ.

‘ಕೋವಿಡ್-19 ರೂಪಾಂತರಿ ವೈರಸ್ ಓಮೈಕ್ರಾನ್ 3ನೇ ಅಲೆ ನಿಯಂತ್ರಿಸಲು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಜಾತ್ರೆ ಹಾಗೂ ಸಂತೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ. ಈ ಸಂಬಂಧ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ಎಂದು ಮಹಾನಗರಪಾಲಿಕೆಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಹುಲಿ-ಸಿಂಹಧಾಮ ವೀಕ್ಷಣೆ ಇಲ್ಲ: ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಜನವರಿ 8 ಮತ್ತು 9, ಜನವರಿ 15 ಮತ್ತು 16 ರಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಪ್ರವಾಸಿಗರ ವೀಕ್ಷಣೆಗೆ
ಲಭ್ಯವಿರುವುದಿಲ್ಲ. ಪ್ರತಿಯಾಗಿ ಜ.11 ಮತ್ತು 18ರ ಮಂಗಳವಾರ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುತ್ತದೆ. ಪ್ರವಾಸಿಗರು ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಸಹಕರಿಸಬೇಕೆಂದು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

ಗ್ರಂಥಾಲಯ ಸೇವೆ ಸ್ಥಗಿತ: ವಾರಾಂತ್ಯ ಕರ್ಫ್ಯೂ ನಿಮಿತ್ತ ಶನಿವಾರ ಹಾಗೂ ಭಾನುವಾರ ಗ್ರಂಥಾಲಯಗಳ ಸೇವೆಯನ್ನು ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಸಾರ್ವಜನಿಕರಿಗೆ ಗ್ರಂಥಾಲಯ ಸೇವೆಯನ್ನು ಒದಗಿಸಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.