ADVERTISEMENT

ಗಾಳಿ ಮಳೆಗೆ ಮುರಿದು ಬಿದ್ದ ಮರದ ರೆಂಬೆ: ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 10:57 IST
Last Updated 18 ಮಾರ್ಚ್ 2020, 10:57 IST
ಸಾಗರಕ್ಕೆ ಸಮೀಪದ ಬಳಸಗೋಡು-ಮಂಚಾಲೆ ಬಳಿ ಮಂಗಳವಾರ ಗಾಳಿ ಮಳೆಯ ಕಾರಣ ಮರದ ರೆಂಬೆ ಮುರಿದು ಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.
ಸಾಗರಕ್ಕೆ ಸಮೀಪದ ಬಳಸಗೋಡು-ಮಂಚಾಲೆ ಬಳಿ ಮಂಗಳವಾರ ಗಾಳಿ ಮಳೆಯ ಕಾರಣ ಮರದ ರೆಂಬೆ ಮುರಿದು ಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.   

ಸಾಗರ: ಸಮೀಪದ ಬಳಸಗೋಡು-ಮಂಚಾಲೆ ಬಳಿ ಮಂಗಳವಾರ ಗಾಳಿ ಮಳೆಯ ಕಾರಣ ಮರದ ರೆಂಬೆ ಮುರಿದು ಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ 206ರ ಸಾಗರ-ಶಿವಮೊಗ್ಗ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.

ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ರಸ್ತೆಗೆ ಬಿದ್ದಿದ್ದ ರೆಂಬೆಯನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಗರದಲ್ಲಿ ಕೆಲಕಾಲ ಗುಡುಗು ಇದ್ದಾಗ್ಯೂ ಮಳೆ ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT