ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿ ಬಳಿ ಹಳ್ಳ ದಾಟುವಾಗ ರೈತ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ಅಗಸರಕೊಪ್ಪದ ಜೆರಾಲ್ಡ್ ಮಚಾದೋ ಅವರ ಪತ್ನಿ ಜಸ್ಟಿನ್ ಮಚಾದೋ (36) ಮೃತ ಮಹಿಳೆ.
ಗದ್ದೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ತಾಯಿ ಜತೆ ಹಳ್ಳ ದಾಟಲು ಹೋಗಿದ್ದ 10 ವರ್ಷದ ಮಗ ಜೊಯೆಲ್ ಅಪಾಯದಿಂದ ಪಾರಾಗಿದ್ದಾನೆ.
ತಾವು ಮುಳುಗುವಾಗಲು ನೀರಿಗೆ ಇಳಿಯದಂತೆ ಮಗನನ್ನು ಎಚ್ಚರಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.