ADVERTISEMENT

ಅಧಿಕಾರಿಗಳ ಜತೆ ಹಳ್ಳಿ ಕಡೆಗೆ: ಶಾಸಕ ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:20 IST
Last Updated 24 ಡಿಸೆಂಬರ್ 2013, 6:20 IST

ತಿಪಟೂರು: ರೈತರ ಸಮಸ್ಯೆ ಆಲಿಸಿ ಸ್ಥಳ­ದಲ್ಲೇ ಪರಿಹಾರ ರೂಪಿಸುವ ಉದ್ದೇಶ­ದಿಂದ ಅಧಿಕಾರಿಗಳೊಂದಿಗೆ ಹಳ್ಳಿಗಳ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳುವು­ದಾಗಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಸೋಮ­ವಾರ ನಡೆದ ರೈತರ ದಿನಾ­ಚರಣೆಯಲ್ಲಿ ಮಾತನಾಡಿ, ಅಧಿಕಾರಿ­ಗಳನ್ನು ಹಳ್ಳಿಗಳಿಗೆ ಕರೆ­ದೊಯ್ದು ರೈತರ ಮನೆ ಬಾಗಿಲಲ್ಲೇ ಪರಿಹರಿಸುವ ಪ್ರಯತ್ನ ನಡೆಯಲಿದೆ. ಫೆಬ್ರುವರಿ­ಯಿಂದ ಈ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಮಾದಿಹಳ್ಳಿ ಪ್ರಕಾಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್.ದೇವರಾಜ್, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋ­ಜಕ ಡಾ.ಸುಜಿತ್, ವಿಷಯ ತಜ್ಞ ಡಾ.ಶ್ರೀನಿವಾಸ್, ತಾ.ಪಂ. ಮಾಜಿ ಅಧ್ಯಕ್ಷೆ ಪುಷ್ಪಾ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಮಾತನಾಡಿದರು.

ಜಿ.ಪಂ.ಸದಸ್ಯೆ ರಾಧಾ ನಾರಾಯಣ­ಗೌಡ, ತಾ.ಪಂ.ಪ್ರಭಾರ ಅಧ್ಯಕ್ಷ ರಾಜು, ಎಪಿಎಂಸಿ ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ಸಿದ್ದಲಿಂಗಮೂರ್ತಿ, ಸುರೇಶ್, ಕಾರ್ಯದರ್ಶಿ ನ್ಯಾಮಗೌಡ, ತಹಶೀಲ್ದಾರ್ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು, ತಾ.ಪಂ. ಸದಸ್ಯರು ಇದ್ದರು.

ರೈತರಾದ ಸದಾಶಿವಯ್ಯ, ಓಂಕಾರಪ್ಪ, ಹೇಮಣ್ಣ, ನೊಣವಿನಕೆರೆ ಸ್ವಾಮಿ, ಜಯದೇವಪ್ಪ ಅವರಿಗೆ ತಾಲ್ಲೂಕು ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.