ADVERTISEMENT

ಅಪರಾಧಿ ರಕ್ಷಿಸುವ ಬಿಜೆಪಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 9:40 IST
Last Updated 11 ಫೆಬ್ರುವರಿ 2012, 9:40 IST

ತುಮಕೂರು: ರಾಜ್ಯದಲ್ಲಿ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿದವರನ್ನು ಬಂಧಿಸುವಂತೆ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಶುಕ್ರವಾರ ನಗರದ ಸ್ವಾತಂತ್ರ ಚೌಕದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಬೇಕು, ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಬದ್ದವಾಗಿ ತಾರತಮ್ಯವಿಲ್ಲದೆ ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿದರು.

ಅಪರಾಧಿಗಳನ್ನು ಬಂಧಿಸಿ ಶಿಕ್ಷಿಸುವ ಬದಲು ರಕ್ಷಣೆಗೆ ನಿಂತಿರುವ ರಾಜ್ಯದ ಬಿಜೆಪಿ ಸರ್ಕಾರದ ಕ್ರಮ ಸಂವಿಧಾನ ಬಾಹಿರವಾದುದು. ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿದವರನ್ನು ಬಂಧಿ ಸದೆ ಇರುವ ಕ್ರಮ ಅಪರಾಧಿಗಳನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಸಾಬಿತು ಪಡಿಸಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್‌ಮುಜೀಬ್ ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್, ರಾಜ್ಯದಲ್ಲಿ ಆರ್‌ಎಸ್‌ಎಸ್ ಜನರ ಏಕತೆ ಮುರಿದಿದೆ. ಕೋಮುವಾದಿ ಅಜೆಂಡಾ ದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪ್ರಸ್ತುತ ಜನರ ಸಮಸ್ಯೆಗಳನ್ನು ಪರಿಹರಿ ಸಲು ವಿಫಲವಾಗಿದೆ. ಉಪ್ಪಿನಗಂಡಿ ಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಪ್ರಭಾಕರ ಭಟ್ಟ ಅವರನ್ನು ಬಂಧಿಸು ವಂತೆ ಆಗ್ರಹಿಸಿದರು.

ನಗರ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ ಮಡೆ ಸ್ನಾನ, ಅಮಾನವಿಯ ಜಾತಿ ಪದ್ಧತಿ ಆಚರಣೆ ಗಳ ಬಗ್ಗೆ ಏನೊಂದು ಉಸಿರು ಬಿಡದ ಆರ್‌ಎಸ್‌ಎಸ್ ನಾಯಕರು, ಹಿಂದೂ ಗಳೆಲ್ಲ ಒಂದೇ ಎಂದು ಹೇಳುವುದು ಬರಿ ಡೊಂಗಿತನವನ್ನು ತೊರುತ್ತಿದ್ದಾರೆ ಎಂದು ದೂರಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ಮೂವರು ಸಚಿವರು ರಾಜೀನಾಮೆ ನೀಡಬಾರದಿತ್ತು ಎಂಬ ನಿಲುವನ್ನು ಬಿಜೆಪಿ ಅಧ್ಯಕ್ಷರು ಪ್ರಕಟಿಸಿರುವುದು ಬಿಜೆಪಿ ಬಂಡತನಕ್ಕೆ ಸಾಕ್ಷಿಯಾಗಿದೆ ಎಂದರು.

ಮುಖಂಡರಾದ ಮಂಜುನಾಥ್, ನರಸಿಂಹರಾಜು, ಸ್ವಾಮಿ, ಶಿವಕುಮಾರ ಸ್ವಾಮಿ, ನವೀನ್, ಪುಟ್ಟೇಗೌಡ ಮಂತಾದವರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.