ADVERTISEMENT

ಆಧಾರ್ ಇಲ್ಲದವರಿಗೆ ಸೌಲಭ್ಯ ಕಡಿತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 9:15 IST
Last Updated 3 ಜೂನ್ 2011, 9:15 IST

ತಿಪಟೂರು: ಆಧಾರ್ ಕಾರ್ಡ್ ಮಾಡಿಸದೆ ನಿರ್ಲಕ್ಷ್ಯ ತೋರುವರರಿಗೆ ಜೂ. 15ರ ನಂತರ ಸರ್ಕಾರಿ ಸೌಲಭ್ಯ ತಡೆಹಿಡಿಯಲಾಗುವುದು ಎಂದು ತಹಶೀಲ್ದಾರ್ ಎ.ಬಿ. ವಿಜಯಕುಮಾರ್ ಎಚ್ಚರಿಸಿದರು.

ಆಧಾರ್ ಕಾರ್ಡ್ ಹೊಂದಲು ಪ್ರೇರೆ ಪಿಸುವ ಸಂಬಂಧ ಸ್ತ್ರೀ ಶಕ್ತಿ ಸಂಘಟನೆ ಮತ್ತು ಅಂಗನವಾಡಿ ಕಾರ್ಯ ಕರ್ತೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ನಗರದಲ್ಲಿ ಬುಧವಾರ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಮುಂಬರುವ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಅಲ್ಲದೆ ಕೆಲ ಖಾಸಗಿ ಸೌಲಭ್ಯ ಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ವಾಗಲಿದೆ. ಈ ಕಾರ್ಡ್ ಪಡೆಯುವುದು ಪ್ರತಿ ಪ್ರಜೆ ಹಕ್ಕು ಮತ್ತು ಕರ್ತವ್ಯ ವಾಗಿದ್ದು, ಸರ್ಕಾರಿ ಸಂಬಂಧಿ ಕಾರ್ಯ ಕರ್ತರು ನಾಗರಿಕರಿಗೆ ತಿಳಿವಳಿಕೆ ನೀಡ ಬೇಕು ಎಂದು ತಿಳಿಸಿದ ಅವರು, ಕಾರ್ಡ್ ಗೆ ಜೂ. 15ರವರೆಗೆ ಅವಕಾಶವಿದೆ. ಕೊನೆ ಹಂತವಾಗಿ ತಾಲ್ಲೂಕಿನ ಕಿಬ್ಬನ ಹಳ್ಳಿ, ನೊಣವಿನಕೆರೆ, ಹೊನ್ನವಳ್ಳಿ, ಹಾಲ್ಕುರಿಕೆ ಹಾಗೂ ನಗರದ ನೌಕರರ ಭವನ ಮತ್ತು ಗಾಂಧಿನಗರದಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಯುತ್ತಿದೆ ಎಂದರು.

ಸಿಡಿಪಿಒ ಎಸ್. ನಟರಾಜ್, ಅಂಗನ ವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಮನೆಮಂದಿಗೆ ಕಡ್ಡಾಯ ವಾಗಿ ಕಾರ್ಡ್ ಪಡೆಯಲು ಪ್ರೇರೇಪಿ ಸಬೇಕು ಎಂದರು.

ಎಸಿಡಿಪಿಒ ಓಂಕಾರಪ್ಪ, ಸುಂದರಮ್ಮ ಮಾತನಾಡಿದರು. ಪ್ರೇಮಾ  ನಿರೂ ಪಿಸಿದರು. ಮಂಜುಳಾ ದೇವಿ ಸ್ವಾಗತಿ ಸಿದರು. ಸುಂದರಬಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.