ADVERTISEMENT

ಈಗಿರುವ ಧ್ವಜವನ್ನೇ ಮುಂದುವರಿಸಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:47 IST
Last Updated 28 ಅಕ್ಟೋಬರ್ 2017, 9:47 IST

ಮಧುಗಿರಿ: ನಾಡ ಧ್ವವಜವನ್ನಾಗಿ ಈಗಿರುವ ಹಳದಿ ಮತ್ತು ಕೆಂಪು ಮಿಶ್ರಿತ ಧ್ವಜವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಅವರಿಗೆ ಶುಕ್ರವಾರ ಮನವಿ ಪತ್ರಸಲ್ಲಿಸಿದರು.

50 ವರ್ಷಗಳಿಂದ ಜನರ ಮನ್ನಣೆಗೆ ಧ್ವಜವನ್ನು ಸರ್ಕಾರ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಈಗಾಗಲೇ ಕನ್ನಡ ನಾಡಿನ ಧ್ವಜ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ ಹಾಗೂ ಎಲ್ಲ ಕಲಾವಿದರ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಿರುವ ಧ್ವಜವನ್ನೇ ಮುಂದುವರಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಸರ್ಕಾರಕ್ಕೆ ಮನವಿ ಪತ್ರವನ್ನು ಕಳಹಿಸಕೊಡಲಾಗುವುದು ಎಂದರು. ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಚಂದನ್, ಕಾರ್ಯಾಧ್ಯಕ್ಷ ತಿಮ್ಮರಾಜು , ಪದಾಧಿಕಾರಿಗಳಾದ ಆನಂದ್, ಮಿಲ್ ರಾಜಣ್ಣ, ರಾಘವೇಂದ್ರ, ಚಿಕ್ಕಕಾಮಯ್ಯ, ನಾಗೇಂದ್ರ, ಪವನ್ ಕುಮಾರ್, ಹರೀಶ್, ಗೋಪಾಲ್, ಕಿರಣ್, ಅಶೋಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.