ADVERTISEMENT

ಕೆರೆ ಮರುನಿರ್ಮಾಣಕ್ಕೆ 4.25 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 8:25 IST
Last Updated 10 ಜೂನ್ 2011, 8:25 IST

ಕುಣಿಗಲ್: ಸ್ವಾತಂತ್ರ್ಯ ಪೂರ್ವದಲ್ಲಿ ಒಡೆದು ಹೋಗಿದ್ದ ತಾಲ್ಲೂಕಿನ ಎರಡು ಕೆರೆಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ರೂ. 4.25 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.

ತಾಲ್ಲೂಕಿನ ಇಪ್ಪಾಡಿ ಸಮೀಪದ ಮುದ್ದುರಂಗನಕೆರೆ ಪ್ರದೇಶಕ್ಕೆ  ಈಚೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ನಂತರ ಮಾತನಾಡಿದರು.

600 ಎಕೆರೆ ವ್ಯವಸಾಯ ಪ್ರದೇಶಕ್ಕೆ ನೀರಾವರಿ ಮೂಲವಾಗಿದ್ದ ಮುದ್ದ ಂಗನಕೆರೆ ನೂರು ವರ್ಷಗಳ ಹಿಂದೆ ಮತ್ತು ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಸಮೀಪದ 500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದ್ದ ಮುದ್ದುಲಿಂಗಯ್ಯನದೊಡ್ಡಿ ಕೆರೆಗಳು 80 ವರ್ಷಗಳ ಹಿಂದೆ ಒಡೆದು ಹೋಗಿದ್ದವು.

ಕಾವೇರಿ ನೀರಾವರಿ ವಲಯದ ವ್ಯಾಪ್ತಿಯಲ್ಲಿ ಕೆರೆಗಳು ಬರಲಿದ್ದು, ಸಣ್ಣ ನೀರಾವರಿ ಇಲಾಖೆ ವಶದಲ್ಲಿದೆ ಎಂದು ಅವರು ತಿಳಿಸಿದರು.

ಕೆರೆಗಳ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಕೇಂದ್ರ ಸರ್ಕಾರ ಮುದ್ದುರಂಗಯ್ಯನ ಕೆರೆ ಮರು ನಿರ್ಮಾಣಕ್ಕೆ 2.25 ಕೋಟಿ ಹಾಗೂ ಮುದ್ದುಲಿಂಗಯ್ಯನದೊಡ್ಡಿ ಕೆರೆ ಮರು ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಮಂಜೂರು ಮಾಡಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ.

ಈ ಕೆರೆಗಳ ನಿರ್ಮಾಣದಿಂದ ಹುತ್ರಿದುರ್ಗ, ಹುಲಿಯೂರುದುರ್ಗ ಹೋಬಳಿಗಳಿಗೆ ನೀರಿನ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.