ADVERTISEMENT

ಖಾಲಿ ನಿವೇಶನದಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:53 IST
Last Updated 21 ನವೆಂಬರ್ 2017, 9:53 IST

ಕೊಡಿಗೇನಹಳ್ಳಿ: ಗ್ರಾಮದ ಜಾಮೀಯ ಮಸೀದಿ ಪಕ್ಕದಲ್ಲಿರು ಖಾಲಿ ನಿವೇಶನದಲ್ಲಿ ಗಿಡ- ಗಂಟೆ ಪೊದೆಗಳಾಗಿದ್ದು, ಇದರ ಜತೆಗೆ ಅದೇ ಜಾಗದಲ್ಲಿ ಸಾರ್ವಜನಿಕರು ಕಸವನ್ನು ಹಾಕುತ್ತಿರುವುದರಿಂದ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ ಎಂದು 1ನೇ ವಾರ್ಡ್‌ನ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದರು.

ಖಾಲಿ ನಿವೇಶನದಲ್ಲಿರುವ ಗಿಡ–ಗಂಟೆ ಮತ್ತು ಕಸದ ರಾಶಿ ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರು ಅಲ್ಲಿನವರು ಗಮನ ಹರಿಸದೆ ಇರುವುದರಿಂದ ಸಾಂಕ್ರಾಮಿಕ ಕಾಯಿಲೆಗಳಾದ ಜ್ವರ, ಚಿಕೂನ್ ಗುನ್ಯಾ ಮತ್ತು ಡೆಂಗಿ ಜ್ವರ ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸಿ ಜನರು ಅಸ್ಪತ್ರೆಗಳಿಗೆ ಅಲೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾವು ಮತ್ತು ಚೇಳುಗಳಿಂದ ರಾತ್ರಿ ಸಮಯದಲ್ಲಿ ಈ ಭಾಗದಲ್ಲಿ ಓಡಾಡಲು ಜನರು ಭಯ ಪಡುವಂತಾಗಿದೆ ಎಂದು ಜಾಮೀಯ ಮಸೀದಿ ಮಾಜಿ ಅಧ್ಯಕ್ಷ ಸೈಯದ್ ನಾಸೀರ್ ಉದ್ದೀನ್ ಆರೋಪಿಸಿದರು.

ADVERTISEMENT

ಕೊಡಿಗೇನಹಳ್ಳಿ ದೊಡ್ಡ ಪಂಚಾಯಿತಿಯಾಗಿ ಹಲವಾರು ಮೂಲಗಳಿಂದ ಹೆಚ್ಚು ವರಮಾನ ಮತ್ತು ಅನುದಾನ ಬರುತ್ತಿದ್ದರು ಮೂಲ ಸೌಕರ್ಯಗಳಿಗೆ ಅದನ್ನ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಪಂಚಾಯಿತಿಯವರು ವಿಫಲರಾಗುತ್ತಿದ್ದಾರೆ. ಈಗಲಾದರು ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು ಎಂದು 1ನೇ ವಾರ್ಡ್‌ನ ಅಬ್ದಲ್ ಮುನಾಪ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.