ADVERTISEMENT

ಜಗ್ಗು ಶಿಂಗ್ರೆಅಯ್ಯಂಗಾರ್ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 8:40 IST
Last Updated 23 ಏಪ್ರಿಲ್ 2011, 8:40 IST

ತುಮಕೂರು: ನಗರದ ನೃಸಿಂಹ ಕಲಾಮಂದಿರದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಹಿತ್ಯ-ಸಂಗೀತ-ನೃತ್ಯೋತ್ಸವದಲ್ಲಿ ಜಗ್ಗು ಶಿಂಗ್ರೆ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿಯನ್ನು ಮೇಲುಕೋಟೆಯ ಸಂಸ್ಕೃತ ವಿದ್ವಾಂಸ ಅರೈಯರ್ ಶ್ರೀರಾಮಶರ್ಮ, ಸಾಹಿತಿ ಕವಿತಾಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.

ಜಗ್ಗು ಶಿಂಗ್ರೆ ಅಯ್ಯಂಗಾರ್ ಕುರಿತ ಬೆಳ್ಳಿಯ ಬಳ್ಳಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಗಾನವಾರಿಧಿ ನೃತ್ಯ ಕಲಾ ಶಾಲೆಯ ಪ್ರಾಂಶುಪಾಲರಾದ ರಂಜನಿ ಜಯಸಿಂಹ ಅವರನ್ನು ಸನ್ಮಾನಿಸಲಾಯಿತು.

ಜೂನಿಯರ್ ವಾದ್ಯ ಸಂಗೀತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನೃಸಿಂಹ ಕಲಾಮಂದಿರದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಜಗ್ಗು ಪ್ರಿಯದರ್ಶಿನಿ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮವನ್ನು ಯೋಗತಜ್ಞ ಎಂ.ಕೆ. ನಾಗರಾಜರಾವ್ ಉದ್ಘಾಟಿಸಿದರು. ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಕೆ.ಪಿ.ಮಹೇಶ್, ಸಂಸ್ಕೃತ ಉಪನ್ಯಾಸಕಿ ಡಾ.ಟಿ.ರಮಾ ಅತಿಥಿಗಳಾಗಿದ್ದರು. ಕಲಾಮಂದಿರದ ಸಂಸ್ಥಾಪಕಿ ರುಕ್ಮಿಣಿ ಗೋಪಾಲ್ ಸ್ವಾಗತಿಸಿದರು.

ನಂತರ ರುಕ್ಮಿಣಿ ಗೋಪಾಲ್ ಅವರ ತಂಡದಿಂದ ಪಂಚವೀಣಾ ವಾದನ, ದೂರದರ್ಶನ ಕಲಾವಿದೆಯರಾದ ಎಂ.ಎ.ಮೀರಾ ಮತ್ತು ಎಂ.ಎ.ಮೈಥಿಲಿ ಅವರ ಸಂಗೀತ ಕಛೇರಿ, ರಂಜಿನಿ ಜಯಸಿಂಹ ಅವರ ನೇತೃತ್ವದಲ್ಲಿ ಭರತನಾಟ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.