ADVERTISEMENT

ಜಿಲ್ಲೆಯಲ್ಲಿ ಒಂದೇ ದಿನ 54 ನಾಮಪತ್ರ

3ನೇ ಬಾರಿ ನಾಮಪತ್ರ ಸಲ್ಲಿಸಿದ ಜಯಚಂದ್ರ, ಕೊರಟಗೆರೆಯಲ್ಲಿ ಪರಮೇಶ್ವರ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 12:18 IST
Last Updated 24 ಏಪ್ರಿಲ್ 2018, 12:18 IST

ತುಮಕೂರು: ಮೇ 12ರಂದು ನಡೆಯುವ ಚುನಾವಣೆಗೆ ಸೋಮವಾರ ಜಿಲ್ಲೆಯ 11 ಕ್ಷೇತ್ರಗಳಿಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಈಗಾಗಲೇ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಸೋಮವಾರ ಬೆಂಬಲಿಗರೊಂದಿಗೆ ಮರವಣಿಗೆಯಲ್ಲಿ ಬಂದು ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಶಾಸಕ ಕೆ.ಷಡಕ್ಷರಿ ಅವರು ತಿಪಟೂರು ವಿಧಾಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ADVERTISEMENT

ನಾಮಪತ್ರ ಸಲ್ಲಿಸಿದ ಪಕ್ಷಗಳ ಅಭ್ಯರ್ಥಿಗಳು: ಗುಬ್ಬಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಜಿ.ಎನ್.ಬೆಟ್ಟಸ್ವಾಮಿ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಕ್ಷದ ಅಭ್ಯರ್ಥಿಯಾಗಿ ಜಿ.ಎಸ್.ರಾಜು, ಪಾವಗಡ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಜಿ.ವಿ.ಬಲರಾಂ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಆರ್.ರಮೇಶ್ ನಾಯ್ಕ್, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆರ್.ಎಸ್.ರವಿಕುಮಾರ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯಾಗಿ ತಾಜುದ್ದೀನ್ ಷರೀಫ್, ತುಮಕೂರು ನಗರ ವಿಧಾನ ಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎನ್.ಗೋವಿಂದರಾಜು, ಬಿಜೆಪಿ ಅಭ್ಯರ್ಥಿಯಾಗಿ ಜಿ.ಬಿ.ಜ್ಯೋತಿಗಣೇಶ್, ರಾಷ್ಟ್ರೀಯ ಮಹಿಳಾ ಎಂಪರ್‌ ಮೆಂಟ್ ಪಕ್ಷದ ಅಭ್ಯರ್ಥಿಯಾಗಿ ನಿಸಾರ್ ಅಹಮದ್, ತುರುವೇಕೆರೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎ.ಎಸ್.ಜಯರಾಮ್, ಕಾಂಗ್ರೆಸ್ ಅಭ್ಯರ್ಥಿಯಾಗಿ ರಂಗಪ್ಪ ಟಿ.ಚೌಧರಿ, ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಟಿ.ಕೃಷ್ಣಪ್ಪ ನಾಮಪತ್ರ ಸಲ್ಲಿಸಿದರು.

ಕುಣಿಗಲ್‌ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಡಿ.ರಂಗನಾಥ್, ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿಯಾಗಿ ಎಚ್.ಆರ್.ಆನಂದ್, ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್, ಮಧುಗಿರಿಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಸೈಯದ್ ಮುಜಮಿಲ್ ಪಾಷ, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಆರ್.ಗೌಡ, ಸಿಪಿಐ ಅಭ್ಯರ್ಥಿಯಾಗಿ ಗಿರೀಶ್, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಎಂ.ಇ.ಪಿ ಅಭ್ಯರ್ಥಿಯಾಗಿ ಎಂ.ಕೆ.ಪಾಷಾ, ಜನತಾದಳ(ಸಂಯುಕ್ತ) ಎಂ.ವಿಜಯೇಂದ್ರರೆಡ್ಡಿ, ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಲೋಕೇಶ್ವರ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿಯಾಗಿ ಶಂಕರಮೂರ್ತಿ, ಎಂ.ಇ.ಪಿ ಅಭ್ಯರ್ಥಿಯಾಗಿ ಎಂ.ರಮೇಶ್, ಶಿವಸೇನೆ ಪಕ್ಷದ ಅಭ್ಯರ್ಥಿಯಾಗಿ ಸಂತೋಷ್ ಕುಮಾರ ಭೈರಾಟೆ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಪಕ್ಷೇತರ ಅಭ್ಯರ್ಥಿಗಳು: ಗುಬ್ಬಿ ಕ್ಷೇತ್ರಕ್ಕೆ ಎನ್.ಎಸ್.ಶ್ರೀನಿವಾಸ್, ಎಂ.ಎನ್.ಶ್ರೀನಿವಾಸಮೂರ್ತಿ, ಎಚ್.ಟಿ.ಕೃಷ್ಣಪ್ಪ, ಶ್ರೀನಿವಾಸ್, ಎಸ್.ಡಿ.ದಿಲೀಪ್‌ಕುಮಾರ್, ಕೊರಟಗೆರೆ ಕ್ಷೇತ್ರಕ್ಕೆ ಎ.ವಿ.ನಾಗರಾಜು, ಎನ್.ಎಸ್.ಗಂಗಯ್ಯ, ಪಾವಗಡ ಕ್ಷೇತ್ರಕ್ಕೆ ಮದ್ಲೇಟಪ್ಪ, ಓ.ಹನುಮಂತರಾಯ, ಎಸ್.ಟಿ.ಮಹೇಶ್, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಯೋಗ ನರಸಿಂಹಮೂರ್ತಿ, ತುರುವೇಕೆರೆ ಕ್ಷೇತ್ರಕ್ಕೆ ಕಪನಿಗೌಡ, ಜಿ.ಎಸ್.ಬಸವಲಿಂಗಯ್ಯ, ಕುಣಿಗಲ್ ಕ್ಷೇತ್ರಕ್ಕೆ ಎಚ್.ಎ.ಜಯರಾಮಯ್ಯ, ಡಿ.ಕೃಷ್ಣಕುಮಾರ್, ಶಿರಾ ಕ್ಷೇತ್ರದಲ್ಲಿ ಎಸ್.ಎನ್.ಕಾಂತರಾಜು ಎನ್.ನರಸಿಂಹಯ್ಯ, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಎಚ್.ಚಂದ್ರಯ್ಯ, ಎಸ್.ಆನಂದ್, ಕೆ.ರಂಗಸ್ವಾಮಿ. ತಿಪಟೂರು ಕ್ಷೇತ್ರಕ್ಕೆ ಎನ್.ಎಲ್.ಮಲ್ಲೇಶ್, ಎಂ.ಮೈಲಾರಿ, ಟಿ.ಶಿವನಾಗ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.