ADVERTISEMENT

ಟಿ.ವಿ.ಸಂಸ್ಕೃತಿಯಿಂದ ಓದಿನ ಸಂಸ್ಕೃತಿಗೆ ಬನ್ನಿ

​ಪ್ರಜಾವಾಣಿ ವಾರ್ತೆ
Published 22 ಮೇ 2012, 8:05 IST
Last Updated 22 ಮೇ 2012, 8:05 IST

ತುಮಕೂರು: ಇಂದಿನ ಮಕ್ಕಳು ಟಿ.ವಿ ಸಂಸ್ಕೃತಿಯಿಂದ ಓದಿನ ಸಂಸ್ಕೃತಿಗೆ ಬಂದಾಗ ಮಾತ್ರ ವ್ಯಾಸಂಗದಲ್ಲಿ ಪ್ರಬುದ್ಧತೆ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ತಿಳಿಸಿದರು.

ತುಮಕೂನಲ್ಲಿ ಸೋಮವಾರ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕಲ್ಪತರು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಮಕ್ಕಳ ಕಾವ್ಯ ಕಮ್ಮಟ ಕುರಿತು ಮಾತನಾಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳು ಚೆನ್ನಾಗಿ ಓದಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಎಲ್ಲಿವರೆವಿಗೂ ಭಾಷೆಯಲ್ಲಿ ಪ್ರಬುದ್ಧತೆ ಇರುವುದಿಲ್ಲವೋ ಅಲ್ಲಿವರೆವಿಗೂ ನಾವು ಬರೆಯುವಂತಹ ಲೇಖನದಲ್ಲಿ ಸ್ಪಷ್ಟತೆ ಕಾಣಲು ಸಾಧ್ಯವಿರುವುದಿಲ್ಲ ಎಂದರು. 

ಸಾಹಿತಿ ಕವಿತಾ ಕೃಷ್ಣ ಮಾತನಾಡಿದರು. ಕಲ್ಪತರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪ್ರೊ.ಸಿ.ಎಚ್.ಮರಿದೇವರು, ಕೆ.ಬಿ.ಜಯಣ್ಣ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿಯವರ, ಜಿಲ್ಲಾ ಬಾಲವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿ ಸದಸ್ಯ ಕೃಷ್ಣಮೂರ್ತಿ ಬಿಳಿಗೆರೆ, ಫ.ಗು.ಸಿದ್ದಾಪುರ, ಡಾ.ನಿಂಗು ಸೊಲಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.