ADVERTISEMENT

ತರಾತುರಿ ರಿಪೇರಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 7:35 IST
Last Updated 16 ಆಗಸ್ಟ್ 2012, 7:35 IST

ತೋವಿನಕೆರೆ: ಕೊರಟಗೆರೆ ರಸ್ತೆಯಲ್ಲಿರುವ ಹೇಮಾವತಿ ನೀರಿನ ಪೈಪ್‌ಲೈನ್‌ಗೆ ಬುಧವಾರ ಕಾಟಾಚಾರದ ರಿಪೇರಿ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹಲವು ತಿಂಗಳಿಂದ ಪೈಪ್‌ಲೈನ್‌ನ ಹೇಮಾವತಿ ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರುತ್ತಿತ್ತು. ಇದೀಗ ನೀರು ರಸ್ತೆಯ ಮೇಲೆ ಹರಿಯದೆ ನೇರವಾಗಿ ಚರಂಡಿ ಸೇರುವಂತೆ ರಿಪೇರಿ ಮಾಡಲಾಗಿದೆ.

ಈ ವಿಷಯ ತಿಳಿದ ಜಿ.ಪಂ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನು ಮೂರು ದಿನದಲ್ಲಿ ಪೈಪ್‌ಲೈನ್‌ನ ಸಂಪೂರ್ಣ ದುರಸ್ತಿಗೆ ಸೂಚಿಸಿದ್ದಾರೆ.

ಸ್ಪಷ್ಟನೆ: ಪೈಪ್‌ಲೈನ್ ಒಡೆದಿರುವ ವಿಚಾರದಲ್ಲಿ ರೈತರನ್ನು ಬಂಧಿಸುವಂತೆ ನಾನು ಯಾರಿಗೂ ಸೂಚಿಸಿಲ್ಲ ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ವ್ಯವಸ್ಥಿತವಾಗಿ ಗಾಳಿಸುದ್ದಿ ಹರಡುತ್ತಿದ್ದಾರೆ. ನಗರ ಪ್ರದೇಶದ ಜನರ ಬಗ್ಗೆ ಇರುವಷ್ಟೇ ಕಾಳಜಿ ಮತ್ತು ಪ್ರೀತಿ ಗ್ರಾಮೀಣ ಪ್ರದೇಶದ ಜನಗಳ ಬಗ್ಗೆಯೂ ಇದೆ ಎಂದು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.