ADVERTISEMENT

ದಾಳಿಂಬೆ: ಸಾಲ ಮನ್ನಾಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:05 IST
Last Updated 13 ಸೆಪ್ಟೆಂಬರ್ 2011, 10:05 IST

ಪಾವಗಡ: ದಾಳಿಂಬೆ ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಾಳಿಂಬೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ನಿರೀಕ್ಷಣಾ ಮಂದಿರದಿಂದ ಹೊರಟ ದಾಳಿಂಬೆ ಬೆಳೆಗಾರರ ಸಂಘದ ಕಾರ್ಯಕರ್ತರು ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಆಧ್ಯಕ್ಷ ವೀರಾಂಜನೇಯ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ದಾಳಿಂಬೆ ದುಂಡಾಣು ರೋಗಕ್ಕೆ ಬಲಿಯಾಗಿದೆ. ಇದರಿಂದ ಮಾಡಿದ ಸಾಲ ತೀರಿಸಲಾಗದೆ ರೈತ ಸಂಕಷ್ಟದಲ್ಲಿದ್ದಾನೆ.

ಸಾಲ ವಸೂಲಿಗೆ ದಾಳಿಂಬೆ ಬೆಳೆ ಗಾರರನ್ನು ನ್ಯಾಯಾಲಯದ ಕಟಕಟೆ ಯಲ್ಲಿ  ನಿಲ್ಲಿಸಿವೆ. ತೀವ್ರ ಸಂಕಷ್ಟದಲ್ಲಿ ದಾಳಿಂಬೆ ಬೆಳೆಗಾರರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ಮೆರವಣಿಗೆಯಲ್ಲಿ ತಾಲ್ಲೂಕು ದಾಳಿಂಬೆ ಬೆಳಗಾರರ ಸಂಘದ ಉಪಾಧ್ಯಕ್ಷ ಸುಬ್ಬರಾಯಪ್ಪ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಚೌದರಿ, ಅಂಜಿನರೆಡ್ಡಿ, ವಾಲ್ಯಾನಾಯ್ಕ, ಮರೂರು ಮುದ್ದವೀರಪ್ಪ, ಕಾಯದರ್ಶಿ ಗಳಾದ ವಾಗೀಶ್ ಹಾಗೂ ಬಸವರಾಜ್, ನರಸಿಂಹಪ್ಪ, ಕೋಟಗುಡ್ಡ ಸುರೇಶ್ ಸೇರಿದಂತೆ ನೂರಕ್ಕೂ ಅಧಿಕ ದಾಳಿಂಬೆ ಬೆಳೆಗಾರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.