ADVERTISEMENT

ದ್ವೇಷಕ್ಕೆ ಕಾನೂನು ಬಳಕೆ: ಆತಂಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:00 IST
Last Updated 10 ಫೆಬ್ರುವರಿ 2012, 9:00 IST

ಚಿಕ್ಕನಾಯಕನಹಳ್ಳಿ: ಕಾನೂನು ರಕ್ಷಣೆ ಗುರಾಣಿಯಾಗದೆ, ಆಯುಧವಾಗುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ. ರಾಜಶೇಖರ್ ವಿಷಾದಿಸಿದರು.

ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತು ಕಾನೂನು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಅನುಕೂಲವಾಗಲಿ ಎಂದು ದೌರ್ಜನ್ಯ ತಡೆ  ಕಾಯ್ದೆ ರೂಪಿಸಲಾಗಿದೆ ಎಂದರು.

ಕಾಯ್ದೆಗಳನ್ನು ಅಗತ್ಯ ಮೀರಿ ದ್ವೇಶಕ್ಕೆ ಬಳಸುವುದು ಹೆಚ್ಚುತ್ತಿದೆ. ಸುಳ್ಳು ದೂರು ನೀಡಿ ಹಗೆ ಸಾಧಿಸುವುದರಿಂದ ನ್ಯಾಯ ನೀಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಎರಡೂ ಕಡೆಯವರ ಅಮೂಲ್ಯ ಸಮಯ ಹಾಳಾಗಲಿದೆ ಎಂದರು.

ನ್ಯಾಯಾಧೀಶರಾದ ಕೆ.ನಿರ್ಮಲ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಪುರಸಭಾಧ್ಯಕ್ಷ ದೊರೆಮದ್ದಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಕೈಸೆರ್, ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಾನಂದ್, ಕಾರ್ಯದರ್ಶಿ ರಾಜಶೇಖರ್, ವಕೀಲರಾದ ಎಂ. ಮಹಲಿಂಗಪ್ಪ, ವೈ.ಜಿ.ಲೋಕೇಶ್, ಚಿಕ್ಕಣ್ಣ, ಸುಲೋಚನ, ಸರ್ಕಾರಿ ಅಭಿಯೋಜಕಿ ಕೆ.ಎನ್.ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು. ಪರಮೇಶ್ವರಪ್ಪ ಸ್ವಾಗತಿಸಿದರು. ಪರ್ವತಯ್ಯ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.