ADVERTISEMENT

ನಮ್ಮ ಸಂಸದ, ನಮ್ಮ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:39 IST
Last Updated 21 ಮಾರ್ಚ್ 2014, 6:39 IST

ಉದ್ಯಮಶೀಲತೆಗೆ ಒತ್ತು ಕೊಡಬೇಕು
ಬ್ಯಾಂಕ್‌ಗಳಲ್ಲಿರುವ ಭದ್ರತಾ ರಹಿತಾ ಸಾಲ, ಜಂಟಿ ಬಾಧ್ಯತಾ ಸಾಲದಂಥ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ಸಂಸದರು ನಮಗೆ ಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಕ್ಷೇತ್ರದ ಆರ್ಥಿಕ ಅಭಿವೃದ್ಧಿಗಾಗಿ ಚಿಕ್ಕಬಳ್ಳಾಪುರ– ಕೋಲಾರ ಕ್ಷೇತ್ರದ ಸಂಸದರ ಮಾದರಿಯಲ್ಲಿ ಬಳಸಿಕೊಳ್ಳಬೇಕು.

ಬದುಕಿನಲ್ಲಿ ಮುಂದೆ ಬರಬೇಕು ಎಂಬ ಛಲ ಇರುವ ಯುವಕರ ಉತ್ಸಾಹವನ್ನಷ್ಟೇ ಗಮನಿಸಿ ತರಬೇತಿ– ಸಾಲ ಸೌಲಭ್ಯ ನೀಡಬೇಕು. ದೆಹಲಿ ಮಟ್ಟದಲ್ಲಿ ವಿತ್ತ ಸಚಿವಾಲಯದ ಮೇಲೆ ಒತ್ತಡ ಹೇರಿ, ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಹಣಕಾಸು ಯೋಜನೆಗಳನ್ನು ಮಂಜೂರು ಮಾಡಿಸಬೇಕು.

ಶೂನ್ಯದಿಂದ ಆರಂಭಿಸಿ ಬೃಹತ್ತಾಗಿ ಬೆಳೆದವರನ್ನು ಗುರುತಿಸಿ, ಜಿಲ್ಲೆಗೆ ಅವರ ಅನುಭವದ ಲಾಭ ದಕ್ಕಿಸಿಕೊಡಬೇಕು. ಅಂಥವರೊಡನೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ‘ಹಿಂದೆ ನಾನು ಬಡವನಾಗಿದ್ದೆ. ಸಮಾಜ– ಸರ್ಕಾರದ ನೆರವಿನಿಂದ ಇಂದು ದೊಡ್ಡ ಉದ್ಯಮಿಯಾಗಿದ್ದೇನೆ. ಇನ್ನೂ ೧೦ ಜನರನ್ನು ನನ್ನಂತೆ ಬೆಳೆಸುತ್ತೇನೆ’ ಎಂಬ ಮನಸ್ಸು ಯುವ ಉದ್ಯಮಿಗಳಿಗೆ ಬರುವಂತೆ ಮಾಡಬೇಕು.
–ರವಿ, ಅಧ್ಯಕ್ಷರು, ಫ್ರೆಂಡ್ಸ್ ಗ್ರೂಪ್, ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.