ADVERTISEMENT

`ನೀರು ಕೇಳುವುದು ಜನರ ಹಕ್ಕು'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:45 IST
Last Updated 2 ಏಪ್ರಿಲ್ 2013, 4:45 IST

ಶಿರಾ: ಕುಡಿಯುವ ನೀರು ಕೇಳುವುದು ಜನರ ಹಕ್ಕು. ನೀರು ರೈತರ ಜೀವನಾಡಿಯಾಗಿದ್ದು, ಅಡಿಕೆ, ತೆಂಗು ನೋಡಿದರೆ ಸಂಕಟವಾಗುತ್ತದೆ. ಶಾಶ್ವತ ನೀರಾವರಿ ವ್ಯವಸ್ಥೆ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ಹೇಳಿದರು.

ತಾಲ್ಲೂಕಿನ ತಾವರೆಕೆರೆಯಲ್ಲಿ ಭಾನುವಾರ ನಡೆದ ನೀರಾವರಿ ಹಕ್ಕೊತ್ತಾಯ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೇಮಾವತಿ, ಭದ್ರೆ, ನೇತ್ರಾವತಿ ಸೇರಿದಂತೆ ಯಾವುದರಿಂದಾಗಲಿ ತಾಲ್ಲೂಕಿಗೆ ನೀರು ಹರಿಸುವ ಹೋರಾಟಕ್ಕೆ ಅಣಿಯಾಗೋಣ ಎಂದರು.

ಹುಂಜನಾಳು ಬಳಿಯ ದೊಡ್ಡಹಳ್ಳದಿಂದ ದೊರೆಯುವ ಸ್ವಾಭಾವಿಕ ಮಳೆ ನೀರಿನ ಜತೆಗೆ ಕಾಲೋಚಿತವಾಗಿ ಹೇಮಾವತಿ ನಾಲೆಯಿಂದ ನೀರು ಪಡೆದು ದೊಡ್ಡ ಅಗ್ರಹಾರ ಕೆರೆಗೆ ಹರಿಸಿ, ಅಲ್ಲಿಂದ ನೈಸರ್ಗಿಕವಾಗಿ ಚಿಕ್ಕಸಂದ್ರ, ಲಕ್ಷ್ಮೀ ಸಾಗರ, ತಾವರೆಕೆರೆ, ಮಾರನಗೆರೆ ಕೆರೆಗಳಿಗೆ ಕುಡಿಯುವ ನೀರನ್ನು ಹರಿಸುವ ಪ್ರಾಸ್ತಾವಿಕ ನಾಲಾ ನಿರ್ಮಾಣ ಯೋಜನೆ ಜಾರಿಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿದರು. ನಿವೃತ್ತ ಎಂಜಿನಿಯರ್ ಜಯರಾಮಯ್ಯ ನೀರು ಹರಿಸುವ ಯೋಜನೆ ಬಗ್ಗೆ ವಿವರಿಸಿದರು.

ಬಿಜೆಪಿ ಮುಖಂಡ ನೇರಲಗುಡ್ಡ ಶಿವಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ, ಟಿ.ಆರ್.ದೇವರಾಜು, ಕೆ.ಮನೋಹರ ನಾಯ್ಕ, ಡಿ.ರಾಮಯ್ಯ, ಎಲ್.ಡಿ.ಕೃಷ್ಣ ಸ್ವಾಮಿ, ಎಲ್.ಆರ್.ಶಿವರಾಮೇಗೌಡ, ಜೆ.ವಿವೇಕಾನಂದ, ಟಿ.ಎನ್.ನರಸಿಂಹಯ್ಯ, ಜೈಕುಮಾರ್,        ಎಲ್.ಎನ್.ರಾಮಕೃಷ್ಣೇಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.