ADVERTISEMENT

ಫ್ಲೋರೈಡ್ ಮುಕ್ತ ನೀರು ನೀಡಲು ಬದ್ಧ

​ಪ್ರಜಾವಾಣಿ ವಾರ್ತೆ
Published 23 ಮೇ 2012, 5:05 IST
Last Updated 23 ಮೇ 2012, 5:05 IST

ಶಿರಾ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಇರುವುದರಿಂದ ಆದಷ್ಟು ಬೇಗ ಫ್ಲೋರೈಡ್ ಮುಕ್ತ ತಾಲ್ಲೂಕು ಮಾಡುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಪ್ರಕಟಿಸಿದರು.ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಡಾ.ವಾಟರ್ ಘಟಕ ಮತ್ತು ನಾದೂರು ಗ್ರಾಮ ಪಂಚಾಯಿತಿ ವತಿಯಿಂದ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. 

ನಗರ ಹೊರತುಪಡಿಸಿ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಕೊರತೆಯಿದ್ದು, ಇದನ್ನು ನೀಗಿಸಬೇಕು ಎಂಬ ಮಹದಾಸೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಯೋಜನೆಗೆ ಯಾವುದೇ ಅಡ್ಡಿ ಆತಂಕ ಬಂದರೂ ನ್ಯಾಯಬದ್ಧವಾಗಿ ಎದುರಿಸಿ ಯಶಸ್ವಿಯಾಗುತ್ತೇನೆ ಎಂದರು.

ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ್, ಮುಖಂಡರಾದ ಚಂಗಾವರ ಮಾರಣ್ಣ, ಮದ್ದೇವಳ್ಳಿ ರಾಮಕೃಷ್ಣ, ಎನ್.ಸಿ.ದೊಡ್ಡಯ್ಯ, ಎ.ಕಾಂತರಾಜು,       ಆರ್.ಟಿ.ನಾರಾಣಪ್ಪ, ಕೆ.ಎಂ.ಶ್ರೀನಿವಾಸ್, ಆನಂದ್, ನರಸಿಂಹಮೂರ್ತಿ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.