ADVERTISEMENT

ಮಲ್ಲಾಘಟ್ಟ ಕೆರೆಯಿಂದ ಕೃಷಿಗೆ ನೀರು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 5:54 IST
Last Updated 5 ಫೆಬ್ರುವರಿ 2014, 5:54 IST
ತುರುವೇಕೆರೆ ತಾಲ್ಲೂಕು ಮಲ್ಲಾಘಟ್ಟದಲ್ಲಿ ಗಂಗಾಪೂಜೆ ನಡೆಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಕೆರೆಯಿಂದ ನೀರು ಹರಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು. ಶಾಸಕ  ಎಂ.ಟಿ.ಕೃಷ್ಣಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಅರಳೀಕೆರೆ ಶಿವಯ್ಯ, ಡಾ.ನಂಜಪ್ಪ, ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್‌ಗಳಾದ ಚಿದಾನಂದ್, ರಾಮಚಂದ್ರಪ್ಪ ಇತರರು ಚಿತ್ರದಲ್ಲಿದ್ದಾರೆ.

ತುರುವೇಕೆರೆ: ಮಲ್ಲಾಘಟ್ಟ ಕೆರೆಯಿಂದ ಮಂಗಳವಾರ ತೂಬೆತ್ತಿ ಕೃಷಿ ಉದ್ದೇಶಕ್ಕೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರಿಂದ 300 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ರೈತರು ಸಂತಸ ವ್ಯಕ್ತಪಡಿಸಿದರು.

ತುರುವೇಕೆರೆ, ಮಲ್ಲಾಘಟ್ಟ ಅಚ್ಚುಕಟ್ಟು ಪ್ರದೇಶದ ರೈತರು ಕೆರೆ ಅಚ್ಚುಕಟ್ಟುದಾರರ ವೇದಿಕೆ ಅಧ್ಯಕ್ಷ ಅರಳಿಕೆರೆ ಶಿವಯ್ಯ ನೇತೃತ್ವದಲ್ಲಿ ಕಳೆದ ವಾರ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ವ್ಯಾಪಕ  ಬೆಂಬಲ ದೊರಕಿತ್ತು. ಇದರಿಂದ ಸಮಿತಿ ತುರ್ತು ಸಭೆ ನಡೆಸಿ, ಅರೆ ಖುಷ್ಕಿ ಬೆಳೆಗೆ ನೀರು ಹರಿಸುವ ನಿರ್ಧಾರವನ್ನು ಪ್ರಕಟಿಸಿತ್ತು.

ಶಾಸಕ ಎಂ.ಟಿ.ಕೃಷ್ಣಪ್ಪ ಗಂಗಾಪೂಜೆ ಸಲ್ಲಿಸಿ ತೂಬೆತ್ತುವ ಮೂಲಕ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕಾರ್ಯಕ್ಕೆ  ಚಾಲನೆ ನೀಡಿ ಮಾತನಾಡಿದರು.

ಡಾ.ನಂಜಪ್ಪ, ತಾ.ಪಂ.ಮಾಜಿ ಸದಸ್ಯ ಹಿರಿಯಣ್ಣ, ಅರಳಿಕೆರೆ ಶಿವಯ್ಯ, ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಚಿದಾನಂದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರಪ್ಪ, ಛೇರ್ಮನ್ ಶಿವಲಿಂಗಪ್ಪ, ಸಿದ್ದಲಿಂಗಪ್ಪ, ಮಹಾಲಿಂಗಪ್ಪ, ಆನೆಕೆರೆ ಗ್ರಾ.ಪಂ. ಸದಸ್ಯ ರವಿಗೌಡ, ಹೊಸಹಳ್ಳಿ ಪ್ರಕಾಶ್, ಶೇಷಪ್ಪ ಭೂವನಹಳ್ಳಿ, ಪ್ರಕಾಶ್ ಗೊಟ್ಟಿಕೆರೆ, ನೀರುಗಂಟಿ ಚಂದ್ರಣ್ಣ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT