ADVERTISEMENT

ರಾಜಕೀಯ ಸಭೆಗೆ ಐಟಿಐ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 8:45 IST
Last Updated 16 ಜೂನ್ 2012, 8:45 IST

ತಿಪಟೂರು: ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಗುರುವಾರ ನಡೆದ ಕಾರ್ಯಕರ್ತರ ಸಭೆಗೆ ಸಭಿಕರ ಸ್ಥಾನ ತುಂಬಲು ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಲಾಗಿತ್ತು.

ಮಕ್ಕಳ ಪಕ್ಷದ ರಾಜ್ಯಾಧ್ಯಕ್ಷ ನಾಗೇಂದ್ರಪ್ರಸಾದ್ ಸಮ್ಮುಖದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸ ಲಾಗಿತ್ತು. ಎಷ್ಟು ಹೊತ್ತಾದರೂ ನಿರೀಕ್ಷಿತ ಕಾರ್ಯಕರ್ತರು ಸೇರಲಿಲ್ಲ.  ಸಮೀಪದ ಲಿಂಗದಹಳ್ಳಿ ಗೇಟ್ ಸರ್ಕಾರಿ ಐಟಿಐ ಉಪನ್ಯಾಸಕರೊಬ್ಬರು ಕಾಲೇಜಿಗೆ ಹೋಗಿ ಎಲ್ಲ ವಿದ್ಯಾರ್ಥಿ ಗಳನ್ನು ಕರೆತಂದರು. ಸರ್ಕಾರಿ ಸಮಾರಂಭ ಅಥವಾ ಶೈಕ್ಷಣಿಕ ಕಾರ್ಯ ಕ್ರಮಕ್ಕೆ ಎಂದು ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಕೂರಿಸಿ ರಾಜಕೀಯ ಭಾಷಣ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಾಗೇಂದ್ರ ಪ್ರಸಾದ್, ಜಿಲ್ಲಾಧ್ಯಕ್ಷ ವಸಂತಕುಮಾರ್, ತಾಲ್ಲೂಕು ಕಾರ್ಯದರ್ಶಿ ಬೆಟ್ಟಪ್ಪ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ವಿಜಯಕುಮಾರ್, ಬಳುವನೇರಳು ಗ್ರಾ.ಪಂ. ಅಧ್ಯಕ್ಷ ಪರಮೇಶ್ವರ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದನ್ನು ಕೆಲ ರಾಜಕೀಯ ಪಕ್ಷಗಳ ಮುಖಂಡರು, ರಾಜಕೀಯ ಸಭೆಗೆ ನೇರವಾಗಿ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರೆತಂದಿರು ವುದು ಖಂಡನಾರ್ಹ. ಕಾರಣರಾದ ಉಪನ್ಯಾಸಕ ಮತ್ತು ಪ್ರಾಂಶುಪಾಲ ರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.