ADVERTISEMENT

ಶಿಕ್ಷಕರಿಗೆ ಬಿಸಿಯೂಟದ ಪಡಿತರ ‘ಭಾರ ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:46 IST
Last Updated 2 ಫೆಬ್ರುವರಿ 2017, 6:46 IST
ಶಿಕ್ಷಕರಿಗೆ ಬಿಸಿಯೂಟದ ಪಡಿತರ ‘ಭಾರ ’
ಶಿಕ್ಷಕರಿಗೆ ಬಿಸಿಯೂಟದ ಪಡಿತರ ‘ಭಾರ ’   
ಹುಳಿಯಾರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ಪಡಿತರವನ್ನು ಆಯಾಯ ಕ್ಲಸ್ಟರ್ ಕೇಂದ್ರಗಳಿಂದ ಕೊಂಡೊಯ್ಯುವ ಕೆಲಸ ಶಾಲೆ ಶಿಕ್ಷಕರ ಮೇಲೆ ಬಿದ್ದಿದೆ. ಇದರಿಂದ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ ಎಂಬ ದೂರು ಕೇಳಿ ಬರುತ್ತಿದೆ.
 
ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಪಡಿತರವನ್ನು ಮೊದಲಿನಿಂದಲೂ ಆಯಾಯ ಶಾಲೆಗ ಳಿಗೆ ಇಳಿಸುವುದು ವಾಡಿಕೆ ಯಾಗಿತ್ತು. ಆದರೆ ಈ ತಿಂಗಳ ಪಡಿತರವನ್ನು ಕ್ಲಸ್ಟರ್ ಕೇಂದ್ರಗಳಲ್ಲಿ ಮಾತ್ರ ಇಳಿಸಿರುವು ದರಿಂದ ಅಲ್ಲಿಂದ ಪ್ರತಿ ಶಾಲೆಯ ಶಿಕ್ಷಕರು ತೆಗೆದುಕೊಂಡು ಹೋಗುವಂತಾಗಿದೆ.
 
ಕಳೆದ 6 ತಿಂಗಳಿಂದಲೂ ಬಿಸಿ ಯೂಟದ ಪಡಿತರ ಸಾಗಾಣಿಕೆಯಲ್ಲಿ ವ್ಯತ್ಯಾಸವಾಗುತ್ತಾ ಬಂದಿದೆ. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಸಿಯೂಟದ ಪಡಿತರ ಶಾಲೆಗಳಿಗೆ ಸಾಗಾಣಿಕೆಯಾಗದ ಕಾರಣ ಬೇರೆ ಬೇರೆ ಶಾಲೆಗಳಿಂದ ಎರವಲು ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಶಿಕ್ಷಕ ರೊಬ್ಬರು ಹೇಳಿದರು.
 
ಆದರೆ ಈ ಸಲ ಕ್ಲಸ್ಟರ್ ಕೇಂದ್ರಗಳಿಂದ ಪಡಿತರ ತರಬೇಕಾದ ಕೆಲಸ ಮಾಡಬೇಕಾಗಿದೆ. ಪಾಠ ಮಾಡಬೇಕೋ, ಪಡಿತರ ತರಬೇಕೋ ಎಂದು ಅವರು ಪ್ರಶ್ನಿಸಿದರು.
 
ಕ್ಲಸ್ಟರ್ ಕೇಂದ್ರಗಳಿಂದ ಕೆಲವು ಶಾಲೆಗಳು ಸುಮಾರು 10 ಕಿ.ಮೀ ದೂರದಲ್ಲಿವೆ. ಇದರಿಂದ ಆಟೊ ಮಾಡಿಕೊಂಡು ಪಡಿತರ ತರುವಂತಾ ಗಿದೆ. ಇಲಾಖೆಯ ಕ್ರಮ ಎಷ್ಟು ಸರಿ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರಾವಾಧ್ಯಕ್ಷ ಎಚ್.ಎಸ್. ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
 
ಪಡಿತರ  ವಿತರಣೆಯ ಗೊಂದಲದ ಕಾರಣ ನಮ್ಮ ಶಾಲೆಯಲ್ಲಿ  ಬಿಸಿಯೂ ಟದ ದಾಸ್ತಾನು ಇಲ್ಲದೆ ಮಕ್ಕಳಿಗೆ ಮನೆಯಿಂದ ಊಟ ತರಲು ಹೇಳಲಾ ಗಿದೆ ಎಂದು  ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.