
ಹುಳಿಯಾರು: ಸ್ವಾಮಿ ವಿವೇಕಾಂದರು ಒಬ್ಬ ಯುಗಪುರುಷ. ಅವರ ಆದರ್ಶಗಳು ಇಂದಿನ ಇಂದಿನ ಯುವಜನತೆಗೆ ದಾರಿದೀಪ ಎದು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಚ್.ಪಿ. ರಾಘವೇಂದ್ರಚಾರ್ ಹೇಳಿದರು.
ಕನಕದಾಸ ಪ್ರೌಢಶಾಲೆಯಲ್ಲಿ ಸೋಮವಾರ ಹಿರಿಯ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಮಾತನಾಡಿದರು.
ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರ ಶಿಷ್ಯ ಪರಂಪರೆ ಹೆಸರಾಗಿದೆ. ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ತಮ್ಮ ಸಂಪೂರ್ಣ ವಿದ್ಯೆಯನ್ನು ಧಾರೆ ಎರೆದಿದ್ದರು. ಆದರೆ ಇಂದಿನ ಗುರು ಶಿಷ್ಯ ಪರಂಪರೆ ಕಳಚಿಕೊಳ್ಳುತ್ತಿದೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯಶಿಕ್ಷಕಿ ಅಶ್ವಿನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ನಿವೃತ್ತ ಶಿಕ್ಷಕ ಎಸ್.ಚನ್ನಬಸಪ್ಪ, ಜಗದೀಶ್, ಚಂದ್ರಶೇಖರ್, ಬಾಲಾಜಿ, ದುರ್ಗಾರಾಜ್, ಚಂದ್ರಶೇಖರ್, ಪುಷ್ಪಲತಾ, ಮಹೇಶಚಾರ್, ಕುಮಾರಸ್ವಾಮಿ, ಮಂಜುನಾಥ್, ತಿಪ್ಪೇಶ್, ಓಂಕಾರ್ಮೂರ್ತಿ, ರವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.