ತಿಪಟೂರು: ಬಟ್ಟೆ ಒಗೆಯುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಜ್ಜೇನಹಳ್ಳಿ ಗ್ರಾಮದ ಭಾಗ್ಯಮ್ಮ, ಅಶೋಕ, ಲಿಂಗರಾಜು, ಜಗದೀಶ್, ದ್ರಾಕ್ಷಾಯಿಣಿ, ಶಾರದಮ್ಮ, ಶಿವಣ್ಣ, ಕುಮಾರ್ ಮತ್ತು ಸಿದ್ಧೇಶ್ ಅವರಿಗೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಾವತಿ 3 ವರ್ಷ ಜೈಲು, ₹2.5 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದೂರುದಾರರಾದ ನಾಗರಾಜ್ ಮತ್ತು ಪತ್ನಿ ಗಂಗಮ್ಮ ಅವರಿಗೆ ₹2.30 ಲಕ್ಷ ನೀಡುವಂತೆ, ಉಳಿದ ₹20 ಸಾವಿರವನ್ನು ಸರ್ಕಾರಕ್ಕೆ ಪಾವತಿಸುವಂತೆ ಕೋರ್ಟ್ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಮಹದೇವಪ್ಪ ಈರಪ್ಪ ಗಡದ್ ಹಾಗೂ ಬಿ.ಕೆ. ನಾಗರತ್ನಮ್ಮ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.