ADVERTISEMENT

ತುಮಕೂರು: ಪಾರ್ಟ್‌ ಟೈಮ್‌ ಕೆಲಸ: ₹43 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:42 IST
Last Updated 22 ಸೆಪ್ಟೆಂಬರ್ 2025, 6:42 IST
ಸೈಬರ್‌
ಸೈಬರ್‌   

ತುಮಕೂರು: ಪಾರ್ಟ್‌ ಟೈಮ್‌ ಕೆಲಸ ಆಮಿಷಕ್ಕೆ ಒಳಗಾಗಿ ನಗರದ ಎಸ್‌ಐಟಿ ಬಡಾವಣೆಯ ಜಿ.ಎಲ್‌.ಹರೀಶ್‌ ₹43.42 ಲಕ್ಷ ಕಳೆದುಕೊಂಡಿದ್ದಾರೆ.

ವಾಟ್ಸ್‌ ಆ್ಯಪ್‌ ಮೂಲಕ ಮೆಸೇಜ್‌ ಮಾಡಿದ ಅಪರಿಚಿತರು ಕೆಲಸದ ಬಗ್ಗೆ ತಿಳಿಸಿದ್ದಾರೆ. ಮೊದಲಿಗೆ ₹200 ವರ್ಗಾಯಿಸಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದು, ಹರೀಶ್‌ ಅದರಂತೆ ಮಾಡಿದ್ದಾರೆ. ನಂತರ ಟಾಸ್ಕ್‌ ಪೂರ್ಣಗೊಳಿಸಿದ್ದು, ಅವರ ಖಾತೆಗೆ ₹300 ಜಮಾ ಆಗಿದೆ. ಅವರ ನಂಬರ್‌ ಅನ್ನು ‘ವಿಐಪಿ ಟಾಸ್ಕ್‌ ಮೆಂಬರ್ಸ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೈಬರ್‌ ಆರೋಪಿಗಳು ಮಾತು ನಂಬಿ ಹಂತ ಹಂತವಾಗಿ ಒಟ್ಟು ₹43,42,500 ಹಣವನ್ನು ವಿವಿಧ ಬ್ಯಾಂಕ್‌ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಅದರಲ್ಲಿ ಹರೀಶ್‌ ಖಾತೆಗೆ ಕೇವಲ ₹300 ಮಾತ್ರ ವಾಪಸ್‌ ಬಂದಿದೆ. ಇನ್ನೂ ಹೆಚ್ಚಿಗೆ ಹೂಡಿಕೆ ಮಾಡಿದರೆ ಮಾತ್ರ ಬಾಕಿ ಹಣ ವಾಪಸ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.