ADVERTISEMENT

ಸರ್ಕಾರದಿಂದಾದ ರೈತನ ಕೊಲೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 7:21 IST
Last Updated 30 ಜನವರಿ 2018, 7:21 IST

ಹಾಗಲವಾಡಿ: ರೈತನ ಆತ್ಮಹತ್ಯೆ ಅಲ್ಲ ಇದು ಸರ್ಕಾರದಿಂದಾದ ಕೊಲೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಹೇಳಿದರು. ಹೊಸಕೆರೆಯಲ್ಲಿ ನಡೆದ ರೈತ ಪರಶಿವಮೂರ್ತಿ ಆತ್ಮಹತ್ಯೆ ಪ್ರಕರಣ ಸಂಬಂಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರೈತರ ಸಾಲಕ್ಕೆ ನೋಟಿಸ್ ನೀಡುವುದಾಗಲಿ, ಮನೆ ಬಾಗಿಲಿಗೆ ಹೋಗಿ ಒತ್ತಾಯ ಮಾಡುವುದಾಗಲಿ ಮಾಡವಂತಿಲ್ಲ. ಆದರೂ ವ್ಯವಸ್ಥಾಪಕ ರೈತರ ಮನೆಗೆ ಹೋಗಿ ರೈತರನ್ನು ಪೀಡಿಸಿ ಸಾವಿಗೆ ಕಾರಣವಾಗಿದ್ದಾರೆ. ಇಂತಹ ವ್ಯವಸ್ಥಾಪಕನನ್ನು ಕೆಲಸದಿಂದ ಅಮಾನತು ಮಾಡಿ ಎಂದು ಒತ್ತಾಯಿಸಿದರು.

ಸಿಕೆಜಿಬಿ ಅಧಿಕಾರಿ ಗೋಪಾಲ ಹೆಗಡೆ ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕನ ವರ್ಗಾವಣೆ ಹಾಗೂ ಪರಿಹಾರ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುವ ಭರವಸೆ ನೀಡಿದರು.

ADVERTISEMENT

ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿದರು. ಮುಷ್ಕರದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಿಜಾನಂದಮೂರ್ತಿ, ಲೋಕೇಶ್, ಮಂಜುನಾಥ, ಗುರುಚನ್ನಬಸಪ್ಪ, ಚಿಕ್ಕ ಸಿದ್ದರಾಮಯ್ಯ, ಶಂಕರಲಿಂಗೇಗೌಡ, ಯತೀಶ್, ರವೀಶ್, ಕಾಳೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.