ADVERTISEMENT

ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿಗೆ ಶೇ98 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 16:02 IST
Last Updated 21 ಏಪ್ರಿಲ್ 2019, 16:02 IST
ಎಂ.ಬಿ.ಯಶಸ್ವಿನಿ (ಶೇ 95)
ಎಂ.ಬಿ.ಯಶಸ್ವಿನಿ (ಶೇ 95)   

ತುಮಕೂರು: ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ತಾಲೂಕಿನ ಕೋಡಿ ಮುದ್ದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98.38 ರಷ್ಟು ಫಲಿತಾಂಶ ಪಡೆದಿದೆ.

ವಿಜ್ಞಾನ ವಿಭಾಗದ ಒಟ್ಟು 62 ವಿದ್ಯಾರ್ಥಿಗಳಲ್ಲಿ 16 ಅತ್ಯುನ್ನತ ಶ್ರೇಣಿ, 45 ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ ಎಂದುಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಿ.ಪಿ. ದೇವರಾಜ್ ತಿಳಿಸಿದ್ದಾರೆ.

ಉನ್ನತ ಶ್ರೇಣಿ: ಕೆ.ಆರ್‌.ಸ್ವಾತಿ (ಶೇ.89.6), ಆರ್.ರಂಗಮ್ಮ (ಶೇ.89), ಟಿ.ಎಸ್.ಸೂರ್ಯ (ಶೇ.88.63), ವಿ.ಪಿ.ಸಹನಾ (ಶೇ.88.63), ಆರ್.ಕಿಶೋರ್ (ಶೇ.88.6), ವಿಕಾಸ್ ನಾಯ್ಕ್(ಶೇ.88.5), ಟಿ.ಎಂ.ವಿನುತಾ (ಶೇ.87.16), ಎಚ್‌.ಡಿ.ಕೃತಿಕ (ಶೇ.86), ರಮೇಶ್ ಎಂ.ಎಸ್ (ಶೇ.85.33) ಅಂಕ ಪಡೆದಿದ್ದಾರೆ. ಗಣಿತ ವಿಷಯದಲ್ಲಿ ಪೂಜಾ ಕೆ.ಎಸ್ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.