ADVERTISEMENT

ವೈದ್ಯರು, ಆಂಬುಲೆನ್ಸ್‌ಗೆ ಆಗ್ರಹಿಸಿ ಧರಣಿ

ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 5:09 IST
Last Updated 29 ಡಿಸೆಂಬರ್ 2022, 5:09 IST
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು, ಆಂಬುಲೆನ್ಸ್ ನೀಡಬೇಕು ಎಂದು ಆಗ್ರಹಿಸಿ ಮಾಯಸಂದ್ರ ಗ್ರಾಮಸ್ಥರು ಬುಧವಾರ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು, ಆಂಬುಲೆನ್ಸ್ ನೀಡಬೇಕು ಎಂದು ಆಗ್ರಹಿಸಿ ಮಾಯಸಂದ್ರ ಗ್ರಾಮಸ್ಥರು ಬುಧವಾರ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು   

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕಾಯಂ ವೈದ್ಯರಿಲ್ಲ. ಆಂಬುಲೆನ್ಸ್ ಕೊರತೆ ಇದೆ ಎಂದು ಆರೋಪಿಸಿ ಮಾಯಸಂದ್ರ ಗ್ರಾಮಸ್ಥರು ವಿಶ‍್ವಮಾನವ ಹಕ್ಕುಗಳ ನೇತೃತ್ವದಲ್ಲಿ ಬುಧವಾರ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ವಿಶ‍್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಮಾತನಾಡಿ, ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಮಾಯಸಂದ್ರದಲ್ಲಿ ಹಲವು ವರ್ಷಗಳಿಂದ ಕಾಯಂ ವೈದ್ಯರಿಲ್ಲದೆ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ
ಎಂದರು.

ಮಾಯಸಂದ್ರ ಹೋಬಳಿ ಜಿಲ್ಲೆಯ ಗಡಿಭಾಗವಾಗಿದೆ. 113 ಹಳ್ಳಿಗಳು ಈ ಹೋಬಳಿ ವ್ಯಾಪ್ತಿಗೆ
ಬರುತ್ತವೆ. ಹೆಚ್ಚು ಅರಣ್ಯ ವಲಯ ಹೊಂದಿರುವ ಸೂಕ್ಷ್ಮ ಪ್ರದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ ಇದೆ. ಇಲ್ಲಿ ಅಪಘಾತಗಳು ಹೆಚ್ಚಿದ್ದು ತುರ್ತು ಚಿಕಿತ್ಸೆ ಪಡೆಯಲು ರೋಗಿಗಳು ಹೆಣಗಾಡುವಂತಾಗಿದೆ eಂದು ಅವರು ದೂರಿದರು.

ADVERTISEMENT

ಸ್ಥಳಕ್ಕೆ ಟಿಎಚ್‍ಒ ಡಾ.ಸುಪ್ರಿಯಾ ಭೇಟಿ ನೀಡಿ, ಹತ್ತು ದಿನಗಳೊಳಗೆ ಕಾಯಂ ಆಂಬುಲೆನ್ಸ್ ನೀಡುವ ಭರವಸೆ ನೀಡಿದರು. ಚಿಕ್ಕನಾಯಕನಹಳ್ಳಿಯಲ್ಲಿರುವ ಹೆಚ್ಚುವರಿ ಆಂಬುಲೆನ್ಸ್‌ ಇಲ್ಲಿ ಕಾರ್ಯ ನಿರ್ವಹಿಸಲಿದೆ
ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‍, ಮಾವಿನಕೆರೆ ಮಂಜುನಾಥ್‍, ಸೋಮು, ಪವನ್, ಹರ್ಷ, ಪುಟ್ಟಣ್ಣ, ರಾಹುಲ್‍, ಮೋಹನ್, ಚನ್ನಪ್ಪ, ಶೀನಾ, ದರ್ಶನ್‍, ಮಹಾವೀರ್ ಬಾಬು, ರಾಜು, ಲೋಕೇಶ್‍, ಹನುಮಣ್ಣ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.