ಕುಣಿಗಲ್: ರಾಷ್ಟ್ರೀಯ ಹೆದ್ದಾರಿ- 75ರ ಹನುಮಾಪುರ ಗೇಟ್ ಬಳಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಕರ್ತವ್ಯನಿರತ ಹೆಡ್‌ಕಾನ್‌ಸ್ಟೆಬಲ್ ‘112’ ತುರ್ತು ಸಹಾಯ ವಾಹನ ಚಾಲಕ ನಿಂಗರಾಜು (44) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಂಗರಾಜು ಜಿಲ್ಲಾ ಶಸಸ್ಟ್ರ ಮೀಸಲು ಪಡೆಗೆ 2005ರಲ್ಲಿ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿದ್ದು, ತುಮಕೂರು ಸೇರಿದಂತೆ ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ತುರ್ತು ಸಹಾಯ ಸ್ಪಂದನ ವಾಹನ (112 ಹೊಯ್ಸಳ) ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಗುರುವಾರ ರಾತ್ರಿ ‘112’ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ, ಅಪಘಾತ ವಲಯ ಎಂದು ಗುರುತಿಸಲಾಗಿದ್ದ ಹನುಮಾಪುರ ಗೇಟ್ ಬಳಿ ಕಾರೊಂದು ರಸ್ತೆಗೆ ಅಡ್ಡಲಾಗಿ ನಿಂತಿದ್ದು, ತೆರವಿಗೆ ಸೂಚನೆ ನೀಡಿದ್ದರೂ ಪ್ರಯೋಜನವಾಗದ ಕಾರಣ ವಾಹನದಿಂದ ಇಳಿದು ಕಾರನ್ನು ತೆರವುಗೊಳಿಸಿ ಮತ್ತೆ ತಮ್ಮ ವಾಹನದ ಬಳಿ ಬರುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.