ADVERTISEMENT

ಪಾವಗಡ| ಅಪಘಾತ: ಮುಖ್ಯ ಶಿಕ್ಷಕಿ ಸಾವು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 6:00 IST
Last Updated 29 ಮಾರ್ಚ್ 2023, 6:00 IST

ಪಾವಗಡ: ತಾಲ್ಲೂಕಿನ ತಿಮ್ಮನಾಯಕನಪೇಟೆ ಬಳಿ ಸೋಮವಾರ ಸಂಜೆ ದ್ವಿಚಕ್ರವಾಹನ ಆಯತಪ್ಪಿ ಬಿದ್ದು ಮುಖ್ಯಶಿಕ್ಷಕಿ ಮೃತಪಟ್ಟಿದ್ದಾರೆ.

ಟಿ.ಎನ್. ಪೇಟೆ ಬಳಿಯ ಖಾಸಗಿ ಶಾಲೆಯ ಮುಖ್ಯಶಿಕ್ಷಕಿ ಲಿಲ್ಲಿ ಪ್ರೇಮ (46) ಮೃತರು.

ಪಟ್ಟಣದಿಂದ ಟಿ.ಎನ್. ಪೇಟೆ ಕಡೆಗೆ ಹೋಗುವಾಗ ದ್ವಿಚಕ್ರವಾಹನ ಆಯತಪ್ಪಿ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.