
ತುಮಕೂರು: ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಚಿಂತನೆ, ಸಹಯೋಗ ಮತ್ತು ಜವಾಬ್ದಾರಿಯುತ ಮುನ್ನಡೆಸುವಿಕೆ ಮಹತ್ವ ಪಡೆದಿದೆ ಎಂದು ಫ್ಲೋರಿಡಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊ.ಎಸ್.ಎಸ್.ಅಯ್ಯಂಗಾರ್ ಹೇಳಿದರು.
ನಗರದ ಎಸ್‌ಐಟಿ ಕಾಲೇಜಿನಲ್ಲಿ ಶುಕ್ರವಾರ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗ, ಎಐಸಿಇಟಿ ಸಹಯೋಗದಲ್ಲಿ ಆಯೋಜಿಸಿದ್ದ ಮಾಹಿತಿ ತಂತ್ರಜ್ಞಾನದ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹೊಸ ತಂತ್ರಜ್ಞಾನ ಸುರಕ್ಷತೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಹೆಚ್ಚು ದಿನ ಜನರ ಮಧ್ಯೆ ಉಳಿಯುತ್ತದೆ. ಈ ಸಮ್ಮೇಳನ ಮಾಹಿತಿ ತಂತ್ರಜ್ಞಾನದ ಭವಿಷ್ಯಕ್ಕೆ ಬೆಳಕು ನೀಡುತ್ತದೆ. ಆಲೋಚನೆಗಳು ಮುಕ್ತವಾಗಿ ಹರಿಯುವ, ಸಹಯೋಗ ಹುಟ್ಟುವ ಮತ್ತು ದೀರ್ಘಕಾಲದ ಪಾಲುದಾರಿಕೆ ರೂಪಿಸುವ ವೇದಿಕೆಯಾಗಲಿ. ಮುಂದಿನ ದಶಕವನ್ನು ನವೋದ್ಯಮ, ನೀತಿ, ಚೌಕಟ್ಟು ಮತ್ತು ತಂತ್ರಜ್ಞಾನ ರೂಪಿಸುವಂತಾಗಲಿ ಎಂದು ಆಶಿಸಿದರು.
ಐಐಟಿ ಧಾರವಾಡದ ನಿರ್ದೇಶಕ ಮಹದೇವ ಪ್ರಸನ್ನ, ಐಇಇಇ ಚಾಪ್ಟರ್‌ನ ಆಸೀಫ್ ಅಲಿ ಅಹ್ಮದ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಎಸ್‌ಐಟಿ ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಪ್ರಾಧ್ಯಾಪಕರಾದ ಎನ್.ಆರ್.ಸುನೀತಾ, ಆರ್.ಅಪರ್ಣಾ, ಟಿ.ಸಿ.ಪ್ರಮೋದ್, ಸುಮಲತಾ ಆರಾಧ್ಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.