ADVERTISEMENT

ಅಡಿಕೆಗೆ ಬೆಳೆ ವಿಮೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 14:38 IST
Last Updated 27 ಜೂನ್ 2020, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: 2020–21ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ರೈತರು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ. ಅಡಿಕೆ, ಪಪ್ಪಾಯ ಮತ್ತು ದಾಳಿಂಬೆ ಬೆಳೆಗಳಿಗೆ ವಿಮೆ ಮಾಡಿಸಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜೂ.30 ಮತ್ತು ಮಾವು ಬೆಳೆಗೆ ಜು.31 ಕೊನೆಯ ದಿನ.

ತುಮಕೂರು ತಾಲ್ಲೂಕಿನಲ್ಲಿ ಅಡಿಕೆ, ಮಾವು, ಗುಬ್ಬಿ, ಪಾವಗಡ, ತುರುವೇಕೆರೆ, ಶಿರಾ, ತಿಪಟೂರು ತಾಲ್ಲೂಕಿನಲ್ಲಿ ಅಡಿಕೆ, ದಾಳಿಂಬೆ, ಪಪ್ಪಾಯ, ಮಾವು, ಕುಣಿಗಲ್ ಅಡಿಕೆ ಮತ್ತು ಮಾವು, ಕೊರಟಗೆರೆ ಅಡಿಕೆ ಮತ್ತು ಮಾವು, ಮಧುಗಿರಿ ಅಡಿಕೆ, ದಾಳಿಂಬೆ ಮತ್ತು ಮಾವು, ಚಿಕ್ಕನಾಯಕನಹಳ್ಳಿ ಅಡಿಕೆ, ಮಾವು, ದಾಳಿಂಬೆ ಬೆಳೆಗಳನ್ನು ಯೋಜನೆಯಡಿ ಒಳಪಡಿಸಲಾಗಿದೆ. ಈ ಬೆಳೆಗಳಿಗೆ ವಿಮೆ ಹಣ ಕಟ್ಟಬಹುದು.

ಆಯಾ ತಾಲ್ಲೂಕಿಗೆ ಬೆಳೆ ವಿಮೆ ಮಾಡಿಸಲು ಸಂಬಂಧಿಸಿದ ರೈತರು ಕೂಡಲೆ ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ADVERTISEMENT

ಈ ಯೋಜನೆಯಲ್ಲಿ ಒಳಪಟ್ಟಿರುವ ಎಲ್ಲ ಬೆಳೆಗಳಿಗೆ ಬೆಳೆ ಸಾಲ ಪಡೆಯುವ, ಪಡೆದ ರೈತರನ್ನು ಕಡ್ಡಾಯವಾಗಿ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿ ಬೆಳೆ ವಿಮೆಗೆ ಒಳಪಡಿಸಲಾಗುತ್ತದೆ.

ಪಟ್ಟಿಗೆ

ಬೆಳೆ: ಪ್ರತಿ ಹೆಕ್ಟೇರ್‌ಗೆ ವಿಮೆ ಮೊತ್ತ : ರೈತರು ಪಾವತಿಸಬೇಕಾದ ಹಣ
ಅಡಿಕೆ 1,28,000 6,400
ದಾಳಿಂಬೆ 1,2700 6,350
ಪರಂಗಿ 1,34000 6,700
ಮಾವು 8,000 4,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.