ADVERTISEMENT

ಸ್ನೇಹಿತರ ಜತೆ ಸೇರಿ ತಂದೆಯನ್ನು ಕೊಂದ ಮಗ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:24 IST
Last Updated 14 ಮೇ 2025, 15:24 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕುಣಿಗಲ್: ಕೌಟುಂಬಿಕ ಕಲಹದಿಂದ ಬೇಸತ್ತ ಮಗ ಸ್ನೇಹಿತರ ಜತೆಗೂಡಿ ತಂದೆಯ ಕೊಲೆ ಮಾಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕ ಘಟಕದ ಮಾಲೀಕ ನಾಗೇಶ (55) ಅವರ ಶವ ಭಾನುವಾರ ಘಟಕದಲ್ಲಿ ಪತ್ತೆಯಾಗಿತ್ತು.

ವಿದ್ಯುತ್ ಪ್ರವಹಿಸಿ ಮೃತಪಟ್ಟ ಶಂಕೆ ವ್ಯಕ್ತಪಡಿಸಿ ಮಗಳು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಕೊಲೆಯಾಗಿರುವುದು ಖಚಿತವಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಮಗ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೆಬ್ಬೂರು ಹೋಬಳಿ ತಿಮ್ಮಸಂದ್ರದ ನಾಗೇಶ್ ಪಟ್ಟಣದಲ್ಲಿ ಐಸ್‌ಕ್ರಿಂ ಘಟಕ ನಡೆಸುತ್ತಿದ್ದರು. ಕೌಟುಂಬಿಕ ಕಲಹ ಕಾರಣದಿಂದ ಪತ್ನಿಯನ್ನು ತೊರೆದಿದ್ದ ನಾಗೇಶ್‌ ಪುತ್ರ ಮತ್ತು ಪುತ್ರಿಯೊಂದಿಗೆ ವಾಸವಿದ್ದರು.

ನಾಗೇಶ್‌ ಮಗ ಸೂರ್ಯ ತಂದೆಯೊಂದಿಗೆ ಜಗಳವಾಡುತ್ತಿದ್ದು ಕೊಲೆ ಮಾಡಲು ನಿರ್ಧರಿಸಿದ್ದ. ಇದಕ್ಕೆ ತಂಗಿಯನ್ನು ಪ್ರೀತಿಸುತ್ತಿದ್ದ ಸಂಜಯ್‌ನ ನೆರವನ್ನು ಪಡೆದಿದ್ದ. ಮಗಳ ಪ್ರೀತಿಗೆ ವಿರೋಧವ್ಯಕ್ತಪಡಿಸಿದ್ದ ನಾಗೇಶ್ ಬಗ್ಗೆ ಸಂಜಯ್‌ಗೂ ಕೋಪವಿತ್ತು. ಹಾಗಾಗಿ ಸಂಜಯ್‌, ಸೂರ್ಯನ ಜತೆ ಸೇರಿ ಮತ್ತೊಬ್ಬ ಸ್ನೇಹಿತ ಕುಣಿಗಲ್‌ನ ಧನುಷ್‌ನೊಂದಿಗೆ ಕೊಲೆಗೆ ಸಂಚು ರೂಪಿಸಿದ್ದರು.

ಸಂಜಯ್ ತನ್ನ ಸ್ನೇಹಿತರಿಗೆ ಸುಪಾರಿ ನೀಡಿದ್ದ. ಹದಿನೈದು ದಿನಗಳ ಹಿಂದೆ ನಾಗೇಶ್ ತಾಲ್ಲೂಕಿನ ಕದರಾಪುರದ್ಲಲಿ ಐಸ್‌ಕ್ರಿಂ ಮಾರಾಟ ಮಾಡಿ ಸರಕು ಸಾಗಣೆ ವಾಹನದಲ್ಲಿ ಬರುತ್ತಿದ್ದಾಗ ಸುಪಾರಿ ಪಡೆದಿದ್ದ ಸಂಜಯ್‌ನ ಸ್ನೇಹಿತರ ತಂಡ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದು ಅಪಘಾತವೆಂಬಂತೆ ಬಿಂಬಿಸಿ ಕೊಲೆಗೆ ಯತ್ನಿಸಿದ್ದರು ಆದರೆ ಇದು ವಿಫಲವಾಗಿತ್ತು.

ನಂತರ ಎರಡನೇ ಪ್ರಯತ್ನದಲ್ಲಿ ಶನಿವಾರ ರಾತ್ರಿ ಸೂರ್ಯ ಮತ್ತು ಧನುಷ್ ಸೇರಿ ಐಸ್‌ಕ್ರೀಂ ತಯಾರಿಕ ಘಟಕದಲ್ಲಿಯೇ ಕೊಲೆ ಮಾಡಿ ನಂತರ ಹಾಸಿಗೆಯಲ್ಲಿ ಮಲಗಿಸಿ ವಿದ್ಯುತ್ ತಂತಿ ತಗುಲಿಸಿ, ವಿದ್ಯುತ್ ಪ್ರವಹಿಸಿ ಮೃತಪಟ್ಟರುವಂತೆ ಬಿಂಬಿಸಿ ಪರಾರಿಯಾಗಿದ್ದರು. 

ಸಿ.ಸಿ ಟಿವಿ ಕ್ಯಾಮೆರಾ ದಾಖಲೆಗಳಿಂದ ಕೊಲೆಯಾಗಿರುವುದು ಧೃಢಪಟ್ಟಿದೆ. ಖಚಿತ ಮಾಹಿತಿ ಮೇರೆಗೆ ಪ್ರಮುಖ ಆರೋಪಿಗಳಾದ ಸೂರ್ಯ, ಸಂಜಯ್, ಧನುಷ್ ಮತ್ತು ಸ್ನೇಹಿತರನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ, ಪಿಎಸ್ಐ ಕೃಷ್ಣಕುಮಾರ್ ಸಿಬ್ಬಂದಿ ಹನುಮಂತು, ಯೋಗೀಶ್, ಯತೀಶ್, ನಟರಾಜು ತಂಡ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.