
ಪ್ರಜಾವಾಣಿ ವಾರ್ತೆಕುಣಿಗಲ್: ‘ತಾಲ್ಲೂಕಿನ ನಡೆಮಾವಿನಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ವೆಂಕಟೆಗೌಡನಪಾಳ್ಯದ ಕೀರ್ತಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೀರ್ತಿ ಪಂಚಾಯಿತಿ ಪಕ್ಕದಲ್ಲಿರುವ ಟೀ ಅಂಗಡಿ ಬಳಿ ನಿಂತಿದ್ದಾಗ ಅಲ್ಲಿಗ ಬಂದ ‘ಮೈತ್ರಿ’ ಕಾರ್ಯಕರ್ತರಾದ ನಡೆಮಾವಿನಪುರ ಅಣೆ ಚಂದ್ರ, ಸುನಿಲ್ ಮತ್ತು ಕಲ್ಲೆಗೌಡನಪಾಳ್ಯದ ಜಗದೀಶ್ ಅವರು, ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಯ ವೇಳೆ ಕಾರ್ಯಕರ್ತರನ್ನು ಕರೆದುಕೊಂಡು ಹೋದ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ನಂತರ ಮಾತಿನ ಮಾತಿನ ಚಕಮಕಿ ನಡೆದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಕೀರ್ತಿ ಅವರನ್ನು ಸ್ಥಳೀಯರು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.