ADVERTISEMENT

ಗುಬ್ಬಿ: ಬೇಟೆರಾಯ ಸ್ವಾಮಿ ಜಾತ್ರಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 3:07 IST
Last Updated 12 ಏಪ್ರಿಲ್ 2022, 3:07 IST
ಗುಬ್ಬಿ ಪಟ್ಟಣದಲ್ಲಿ ಸೋಮವಾರ ಬೇಟೆರಾಯ ಸ್ವಾಮಿ ರಥೋತ್ಸವ ನಡೆಯಿತು
ಗುಬ್ಬಿ ಪಟ್ಟಣದಲ್ಲಿ ಸೋಮವಾರ ಬೇಟೆರಾಯ ಸ್ವಾಮಿ ರಥೋತ್ಸವ ನಡೆಯಿತು   

ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಬೇಟೆರಾಯ ಸ್ವಾಮಿ ಬ್ರಹ್ಮ ರಥೋತ್ಸವವು ಸೋಮವಾರ ನಡೆಯಿತು.

ಬೆಳಿಗ್ಗೆ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾ ಭಿಷೇಕ, ಕ್ಷೀರಾಭಿಷೇಕ, ಹವನ, ಹೋಮ ನಡೆಸಿದ ನಂತರ ಪೂರ್ಣಾ ಹುತಿ ನೀಡಲಾಯಿತು. ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಮಹಾ ಮಂಗಳಾರತಿ ನಂತರ ಮಧ್ಯಾಹ್ನ 1 ಗಂಟೆಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ವಿಶೇಷ ಪುಷ್ಪಗಳಿಂದ ಅಲಂಕೃತವಾಗಿದ್ದ ತೇರಿನಲ್ಲಿ ಕೂರಿಸಲಾಯಿತು. ಈ ಬಾರಿ ತಾಲ್ಲೂಕಿನಾದ್ಯಂತ ಭಕ್ತರು ಆಗಮಿಸುವ ಮೂಲಕ ಜಾತ್ರೆ ಕಳೆಗಟ್ಟಿತ್ತು.‌

ADVERTISEMENT

ರಥೋತ್ಸವದಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯರು, ಎಲ್ಲಾ ಪಕ್ಷಗಳ ಮುಖಂಡರು, ಪಟ್ಟಣದ 18 ಕೋಮಿನ ಮುಖಂಡರು, ತಹಶೀಲ್ದಾರ್ ಬಿ. ಆರತಿ ಭಾಗವಹಿಸಿದ್ದರು. ಭಕ್ತರಿಗೆ ಪಾನಕ, ಫಲಹಾರ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.