
ಪ್ರಜಾವಾಣಿ ವಾರ್ತೆಹುಳಿಯಾರು: ಪಟ್ಟಣ ಸಮೀಪದ ಕೋಡಿಪಾಳ್ಯದ ಕಂಕಾಳೇಶ್ವರ, ತುಳಜಾ ಭವಾನಿ ಹಾಗೂ ಮಾರಿಕಾಂಭ ದೇವಿಯ 7ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮೇ 17 ಮತ್ತು 18ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ನಂದಿಹಳ್ಳಿ ಶಿವಣ್ಣ ತಿಳಿಸಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭ್ರಮರಿ ಡಾನ್ಸ್ ರೆಪರ್ಟರಿಯಿಂದ ಸ್ನೇಹಾ ಕಪ್ಪಣ್ಣ ನಿರ್ದೇಶನದಲ್ಲಿ ಭರತನಾಟ್ಯ ಆಯೋಜಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.