ಕೊಡಿಗೇನಹಳ್ಳಿ (ಮಧುಗಿರಿ ತಾ.): ಹೋಬಳಿಯ ಕಡಗತ್ತೂರು ಗ್ರಾಮದ ಹನುಮಂತಪ್ಪ ಎಂಬುವರ ದ್ವಿಚಕ್ರವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೈಕ್ ಸುಟ್ಟುಕರಕಲಾಗಿದೆ.
ಹನುಮಂತಪ್ಪ ಅ. 31ರಂದು ರಾತ್ರಿ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿ ಮಲಗಿದ್ದಾರೆ. ಬೆಳಗಿನಜಾವ ಟೈರ್ ಸುಟ್ಟಿರುವ ವಾಸನೆ ಬಂದಿದ್ದರಿಂದ ಎಚ್ಚರಗೊಂಡು ಹೊರಗಡೆ ಬಂದು ನೋಡಿದಾಗ ಬೈಕ್‌ಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ಆಗ ನೆರೆಹೊರೆಯವರು ಬೆಂಕಿ ನಂದಿಸಿದ್ದಾರೆ. ₹ 40 ಸಾವಿರ ನಷ್ಟವಾಗಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.