ADVERTISEMENT

ತುಮಕೂರು: ದೇವಸ್ಥಾನಗಳ ಹುಂಡಿ, ಬೈಕ್‌ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 15:43 IST
Last Updated 27 ಅಕ್ಟೋಬರ್ 2023, 15:43 IST

ತುಮಕೂರು: ದೇವಸ್ಥಾನಗಳ ಹುಂಡಿ, ಬೈಕ್‌ ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಿ 2 ಬೈಕ್‌ ವಶಕ್ಕೆ ಪಡೆಯಲಾಗಿದೆ.

ಶಿರಾ ತಾಲ್ಲೂಕಿನ ಬುವನಹಳ್ಳಿಯ ತಿಪ್ಪೇಶ್‌ (33) ಬಂಧಿತ ಕಳ್ಳ. ಅ. 19ರಂದು ನಗರದ ಅಮಾನಿಕೆರೆ ಬಳಿ ನಗರದ ನಿವಾಸಿ ವೆಂಕಟೇಶ್‌ ಎಂಬುವರ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ತನಿಖೆ ಕೈಗೊಂಡ ಅಧಿಕಾರಿಗಳು ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆರೋಪಿಯು ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಮತ್ತೊಂದು ಬೈಕ್‌ ಕಳ್ಳತನ ಮಾಡಿರುವುದು ಗೊತ್ತಾಗಿದೆ. ತಿಲಕ್‌ಪಾರ್ಕ್‌ ಠಾಣಾ ವ್ಯಾಪ್ತಿಯ ಶನಿಮಹಾತ್ಮ ದೇವಸ್ಥಾನದ ಬಾಗಿಲು ಹೊಡೆದು ಕಳ್ಳತನ, ಜಯನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನದಲ್ಲಿ ಆರೋಪಿ ಭಾಗಿಯಾಗಿದ್ದ. ಈ ಪ್ರಕರಣಗಳ ವಿಚಾರಣೆ ನಡೆಸಿದ ಪೊಲೀಸರು ₹1.20 ಲಕ್ಷ ಮೌಲ್ಯದ ಮಾಲು ವಶಕ್ಕೆ ಪಡೆದಿದ್ದಾರೆ.

ADVERTISEMENT

ಡಿವೈಎಸ್‌ಪಿ ಕೆ.ಆರ್‌.ಚಂದ್ರಶೇಖರ್‌ ನೇತೃತ್ವದಲ್ಲಿ ನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌.ದಿನೇಶ್‌ ಕುಮಾರ್‌, ಸಬ್‌ಇನ್‌ಸ್ಪೆಕ್ಟರ್‌ ಎಸ್‌.ಸಿ.ಭಾರತಿ, ಸಿಬ್ಬಂದಿ ದಿನೇಶ್‌, ಚಂದನ್‌, ರವಿಚಂದ್ರ ಅವರ ತಂಡ ಆರೋಪಿಯನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.