ADVERTISEMENT

ನೀಲಿ ನಾಲಿಗೆ ರೋಗ: 15 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 4:54 IST
Last Updated 8 ಡಿಸೆಂಬರ್ 2021, 4:54 IST
ತಿಪಟೂರು ತಾಲ್ಲೂಕಿನ ಗೆದ್ದಲೇಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನೀಲಿ ನಾಲಿಗೆ ರೋಗದಿಂದ ಕುರಿ ಮೃತಪಟ್ಟಿದೆ
ತಿಪಟೂರು ತಾಲ್ಲೂಕಿನ ಗೆದ್ದಲೇಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನೀಲಿ ನಾಲಿಗೆ ರೋಗದಿಂದ ಕುರಿ ಮೃತಪಟ್ಟಿದೆ   

ಪ್ರಜಾವಾಣಿ ವಾರ್ತೆ

ತಿಪಟೂರು (ತುಮಕೂರು): ತಾಲ್ಲೂಕಿನ ಗೆದ್ದಲೇಹಳ್ಳಿ ಗೊಲ್ಲರಹಟ್ಟಿಯಲ್ಲಿ ನೀಲಿ ನಾಲಿಗೆ ರೋಗದಿಂದಾಗಿ 15ಕ್ಕೂ
ಹೆಚ್ಚು ಕುರಿಗಳು ಮೃತಪಟ್ಟಿವೆ.

ಒಂದು ವಾರದಿಂದ ಕುರಿ ಹಾಗೂ ಮೇಕೆಗಳ ಮೂಗಿನಿಂದ ಗೊಣ್ಣೆ ಸುರಿಯುತ್ತಿದ್ದು, ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಓಡಾಡಲು ಆಗದೆ ನಿತ್ರಾಣಗೊಂಡಕುರಿಗಳು ನಿಂತ ಸ್ಥಳದಲ್ಲಿಯೇ
ಸಾವನ್ನಪ್ಪುತ್ತಿವೆ.

ADVERTISEMENT

ಮಣಿಕಿಕೆರೆ ಗ್ರಾಮದ ಪಶುವೈದ್ಯಾಧಿಕಾರಿ ಹಾಗೂ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಕುರಿಗಾರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.