ತುರುವೇಕೆರೆ: ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮ ಎರಡೂ ಪೂರಕ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ವಿರಕ್ತಮಠ ರಸ್ತೆಯಲ್ಲಿನ ಲಯನ್ಸ್ ಭವನದಲ್ಲಿ ಸುರಭಿ ಸಂಗಮ, ತುರುವೇಕೆರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಯನ್ಸ್ ಮತ್ತು ರೋಟರಿ ಸಂಸ್ಥೆಯಿಂದ ಯೋಧ ಡಿ.ರಾಮಸ್ವಾಮಿ ಸ್ಮಾರಕ ಅಂಗವಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನಗಳು ಬೌದ್ಧಿಕ ಸರಕುಗಳಾದರೆ, ಲೋಕಸತ್ಯಗಳನ್ನು ಆಧ್ಯಾತ್ಮ ತಿಳಿಸಿಕೊಡುತ್ತದೆ. ಆದರೆ ಆಧ್ಯಾತ್ಮ ಮತ್ತು ವಿಜ್ಞಾನದ ತಿಳುವಳಿಕೆ ಎಲ್ಲರಿಗೂ ಅತ್ಯಗತ್ಯ. ಈ ಎರಡೂ ಪರಿಕಲ್ಪನೆಯಲ್ಲಿ ಯಾವುದೇ ವೈರುಧ್ಯವಿಲ್ಲ ಎಂದರು.
ಮಾಜಿ ಯೋಧ ಹನುಮಂತರಾಯಪ್ಪ ಅವರನ್ನು ಸನ್ಮಾನಿಸಲಾಯಿತು. ಚರ್ಚಾಸ್ಪರ್ಧೆ ವಿಜೇತ ಎಂಟು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸೋಮಶೇಖರ್, ಲಯನ್ಸ್ ಸಂಘದ ಅಧ್ಯಕ್ಷ ಎಚ್.ಎನ್.ಪರಮೇಶ್ವರಯ್ಯ, ವೈದ್ಯ ನಾಗರಾಜ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಇಂದಿರಾ, ಪ್ರಸಾದ್, ಸುನಿಲ್, ಮಲ್ಲಿಕಾರ್ಜುನ್, ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.